ತುಳಸಿ ಗಿಡಜೋತಿಷ್ಯ
ತುಳಸಿ ಗಿಡವು ಒಂದು ಅದ್ಬುತವಾದ ಔಷಧೀಯ ಸಸ್ಯವಾಗಿದೆ. ಅಲ್ಲದೇ ವಾಸ್ತು ಶಾಸ್ತ್ರದಲ್ಲಿ ಈ ತುಳಸಿ ಗಿಡವು ಸಕಲ ವಾಸ್ತು ದೋಷಗಳನ್ನು ನಿವಾರಣೆ ಮಾಡುತ್ತದೆ. ಹಾಗೂ ಸುಖ ಸಂತೋಷದಿಂದ ಬಾಳಬಹುದು. ಪುರಾತನ ಗ್ರಂಥಗಳ ಪ್ರಕಾರ ತುಳಸಿಯು ಅಗೋಚರವಾಗಿ ಬಹಳ ಭಾರವನ್ನು ನೀಡುತ್ತದೆ.
ಈ ತುಳಸಿಯ ಒಂದು ದಳವು ಶ್ರೀಮನ್ ನಾರಾಯಣನ ತೂಕಕ್ಕೆ ಸಮವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಎಲ್ಲಿ ಭಾರ ಬೇಕೊ ಅಥವಾ ಎಲ್ಲಿ ವಾಸ್ತು ದೋಷವಿದೆಯೋ ಅಲ್ಲಿ ಇಟ್ಟು ಪೂಜಿಸಬೇಕು. ಸಾಮಾನ್ಯವಾಗಿ ನೈಋತ್ಯ ಮತ್ತು ದಕ್ಷಿಣದಲ್ಲಿ ಭಾರವಿರಬೇಕಾಗುತ್ತದೆ.
ಈ ದಿಕ್ಕುಗಳಲ್ಲಿ ಸ್ಥಾಪಿಸಿದರೆ ಸಮತೋಲನ ಮಾಡಬಹುದು. ಆದರೆ ಇದು ದೇವರಿಗೆ ಸಮಾನವೆಂದು ಈಶಾನ್ಯದಲ್ಲಿ ಬೆಳೆಸಿದರೆ ಕೆಲಸ ಕಾರ್ಯಗಳಲ್ಲಿ ತೊಂದರೆ ಮತ್ತು ಮಾನಸಿಕವಾಗಿ ಅಸಮತೋಲನ ಪಡಬೇಕಾಗುತ್ತದೆ.ಆದರೆ ಈಗಾಗಲೇ ನೈಋತ್ಯದಲ್ಲಿ ನೀರಿನ ಟ್ಯಾಂಕ್ ಇದ್ದರೆ ಆ ಜಾಗದಲ್ಲಿ ಇಡಬಾರದು.
ಪಶ್ಚಿಮ ಅಥವಾ ದಕ್ಷಿಣದಲ್ಲಿಡಬೇಕು ಮತ್ತು ಗೃಹ ಪ್ರವೇಶಕ್ಕೆ ಮೊದಲು ಮೂರು ದಿನ ಮುಂಚಿತವಾಗಿ ತುಳಸಿ ಗಿಡವನ್ನು ಇಟ್ಟು ನೀರೆರೆಯಬೇಕು. ಈ ಗಿಡವು ಒಣಗಿದರೆ ವಾಸ್ತು ದೋಷ ಅಥವಾ ಬೇರಾವುದೋ ದೋಷವಿದೆ ಎಂದು ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ.
ಈ ಪವಿತ್ರವಾದ ತುಳಸಿ ಗಿಡವನ್ನು ಎಲ್ಲಿ ಪೂಜಿಸುತ್ತಾರೋ ಅಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು, ಶ್ರೀ ಲಕ್ಷ್ಮಿ, ಸರಸ್ವತಿ , ಮಂಗಳಗೌರಿ , ಸಪ್ತ ಋಷಿಗಳು, ಸಪ್ತ ಕನ್ಯೆಯರು, ಅಷ್ಟ ದಿಕ್ಪಾಲಕರು, 33 ಕೋಟಿ ದೇವತೆಗಳು, ಸಪ್ತ ಸಮುದ್ರಗಳು , ಸರ್ವ ತೀರ್ಥಗಳು, ಸರ್ವ ಜೀವ ನದಿಗಳು, ಯಕ್ಷ ಕಿನ್ನರ ಕಿಂಪುರುಡ ಗರುಡ ಗಂಧರ್ವರು ಇರುತ್ತಾರೆಂದು ಅಗಸ್ತ್ಯ ಸಂಹಿತೆಯಲ್ಲಿ ಉಲ್ಲೇಖಿತವಾಗಿದೆ.