ಬಾಗಲಕೋಟೆ : ಮೈತುಂಬಿ ಹರಿಯುತ್ತಿರುವ ಹುಲಿಗೆಮ್ಮ ಫಾಲ್ಸ್‌ ಕಂಡು ಪ್ರವಾಸಿಗರು ಫಿದಾ

ಬಾಗಲಕೋಟೆ : ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನಲೆ ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, ರಾಜ್ಯದ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಇತ್ತ ಬಾಗಲಕೋಟೆಯಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ  ಜಿಲ್ಲೆಯ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದಾಗಿರುವ ಹುಲಿಗೆಮ್ಮ ಫಾಲ್ಸ್​ ಮೈದುಂಬಿ ಹರಿಯುತ್ತಿವೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಿ.ಎನ್​​​.​ ಜಾಲಿಹಾಳ ಗ್ರಾಮದಿಂದ ಕೇವಲ 2 ಕೀಲೋ ಮೀಟರ್ ದೂರದಲ್ಲಿ ಇರುವ ಬೆಟ್ಟದ ಬಳಿ ಹುಲಿಗೆಮ್ಮ ಫಾಲ್ಸ್​ ಸಿಗುತ್ತೆ. ಮಳೆಯಾದ ಹಿನ್ನಲೆ ಫಾಲ್ಸ್‌ ತುಂಬಿ ಹರಿಯುತ್ತಿದ್ದು, ನೊರೆಯಂತೆ ಹರಿಯುತ್ತಿರುವ ನೀರು ನೋಡುಗರ ಕಣ್ಮನ ಸೆಳೆಯುತ್ತಿದೆ. ಸುಮಾರು ನೂರು ಅಡಿ ಬೆಟ್ಟದ ಮೇಲಿಂದ ನೀರು ಬೀಳುತ್ತಿರುವ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವನ್ನು ಸೃಷ್ಟಿಸಿದೆ.

ಹುಲಿಗೆಮ್ಮ ಕೊಳ್ಳವು ಈ ಹಿಂದೆ ಸಾಧು ಸಂತರು ತಪಸ್ಸು ಮಾಡುವ ಸ್ಥಳವಾಗಿತ್ತು ಎನ್ನಲಾಗಿದೆ. ಹುಲಿಗೆಮ್ಮ ದೇವಿ ಸೇರಿದಂತೆ ಸಪ್ತ ಮಾತೃಕೆಯರ, ಈಶ್ವರ ಲಿಂಗ ಹೊಂದಿರುವ ಚಿಕ್ಕ ಚಿಕ್ಕ ದೇವಾಲಯ ಕೂಡ ಇದೆ. ಪ್ರತಿ ವರ್ಷ ಪ್ರವಾಸಿಗರು ಮಳೆಗಾಲ ಸಮಯದಲ್ಲಿ ಬಂದು ನೀರಲ್ಲಿ ಮಿಂದೆದ್ದು ಹೋಗುತ್ತಾರೆ. ಆದರೆ ಈ ಭಾರಿ ಸುರಿದಿರುವ ಭರ್ಜರಿ ಮಳೆಯಿಂದಾಗಿ ಹುಲಿಗೆಮ್ಮ ಕೊಳ್ಳ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ. ಈ ಬಾರಿ ನೀರಿನ ಮಟ್ಟ ಹೆಚ್ಚಿದ್ದು ಪ್ರವಾಸಿಗರು ಮುಂಜಾಗ್ರತೆ ವಹಿಸಬೇಕಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

Author:

...
Keerthana J

Copy Editor

prajashakthi tv

share
No Reviews