ಇಂದು ಅಂತರರಾಷ್ಟ್ರೀಯ ಸ್ಕೀಜೋಫ್ರೆನಿಯಾ ದಿನ

ಬೆಂಗಳೂರು: ಮೇ 24ನ್ನು ಅಂತರರಾಷ್ಟ್ರೀಯ ಸ್ಕೀಜೋಫ್ರೆನಿಯಾ ದಿನವಾಗಿ ಆಚರಿಸಲಾಗುತ್ತಿದ್ದು, ಈ ದಿನದ ಮೂಲಕ ಸ್ಕೀಜೋಫ್ರೆನಿಯಾ ರೋಗಿಯು ಪ್ರತಿದಿನ ಅನುಭವಿಸುವ ಮಾನಸಿಕ ಸಂಘರ್ಷಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ, ಸಹಾನುಭೂತಿ, ಜಾಗೃತಿಯನ್ನು ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

ಸ್ಕೀಜೋಫ್ರೆನಿಯಾ ಒಂದು ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆಯಾಗಿದ್ದು, ಇದು ರೋಗಿಯ ಭಾವನೆ, ಯೋಚನೆ ಹಾಗೂ ವರ್ತನೆಗೆ ಪರಿಣಾಮ ಬೀರುತ್ತದೆ.  ಭ್ರಮೆ, ದಿಗ್ಭ್ರಮೆ, ಊಹೆ ಆಧಾರಿತ ಯೋಚನೆಗಳು, ಅವ್ಯವಸ್ಥಿತ ಚಿಂತನೆ ಮತ್ತು ಸಮಾಜದ ಜೊತೆಗೆ ಸಂಪರ್ಕ ಕಳೆದುಕೊಳ್ಳುವಂತಹ ಲಕ್ಷಣಗಳು ಹೆಚ್ಚಾಗಿ ಸ್ಕೀಜೋಫ್ರೇನಿಯಾ ಬಳಲುತ್ತಿರುವ ವ್ಯಕ್ತಿಗಳಲ್ಲಿ ಕಂಡುಬರುತ್ತವೆ. ಇಂತಹ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರ ಸಲಹೆ ಪಡೆಯುವುದು ಅವಶ್ಯಕ. ದೇಶದ್ಯಾಂತ ಹಲವು ಜನರು ಈ ರೋಗದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ತಜ್ಞರ ಪ್ರಕಾರ, ಸ್ಕೀಜೋಫ್ರೇನಿಯಾ ಈ ರೋಗವು ಮಾರಕವಲ್ಲ, ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ರೆ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ಈ ರೋಗಲಕ್ಷಣ ಹೊಂದಿರುವ ಸುಮಾರು 10% ಜನರು ಆತ್ಮಹತ್ಯೆಗೆ ಪ್ರಯತ್ನಿಸಬಹುದು. ಆರಂಭಿಕ ಹಂತದಲ್ಲಿ ಈ ಕಾಯಿಲೆಯನ್ನು ಗುರುತಿಸಿ, ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಸಮರ್ಥ ಮನೋಚಿಕಿತ್ಸೆ ನೀಡುವುದರಿಂದ ರೋಗಿಯು ಸಮರ್ಪಕ ಜೀವನ ನಡೆಸಲು ಸಾಧ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

 

 

 

Author:

...
Sushmitha N

Copy Editor

prajashakthi tv

share
No Reviews