ತಿಪಟೂರು : ಖ್ಯಾತ ಸಾಹಿತಿ ಹೆಚ್.ಎಸ್.ವೆಂಕಟೇಶ್ ಮೂರ್ತಿ ನಿಧನ | ತಿಪಟೂರಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ತಿಪಟೂರು : ತಿಪಟೂರು ಹಾಸನ ಸರ್ಕಲ್ ನಂದಿನಿ ಡೈರಿ ಮುಂಭಾಗ ನಿಧಾನರಾದ ಖ್ಯಾತ ಸಾಹಿತಿ ಎಚ್ಎಸ್ ವೆಂಕಟೇಶ್ ರವರಿಗೆ  ಕರ್ನಾಟಕ ಸಂಪಾದಕರು ಹಾಗೂ ವರದಿಗಾರರ ಸಂಘದ ವತಿಯಿಂದ ಬೆಳಗ್ಗೆ 10 ಗಂಟೆಗೆ  ಶ್ರದ್ಧಾಂಜಲಿ ಅರ್ಪಿಸಲಾಯಿತು.

ಇದೇ ವೇಳೆ ಅಗಲಿದ ಹಿರಿಯ ಸಾಹಿತಿ ವೆಂಕಟೇಶ್ ಅವರಿಗೆ ಒಂದು ನಿಮಿಷ ಮೌನವಾಚರಿಸಿ, ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಜಿಲ್ಲಾಧ್ಯಕ್ಷರಾದ ಭಾಸ್ಕರಾಚಾರ್ ಮಾತನಾಡಿ,  ಗೀತೆ ರಚನೆಕಾರ ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರಿಗೆ 80 ವರ್ಷ ವಯಸ್ಸಾಗಿತ್ತು. ಇಂದು ಬೆಳಿಗ್ಗೆ 7ಗಂಟೆಗೆ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದ ಹೆಚ್.ಎಸ್.ವೆಂಕಟೇಶ್ ಮೂರ್ತಿ ಸಾಹಿತ್ಯ ರಚನೆಯಲ್ಲಿ ಅದ್ಭುತ ಕೃಷಿ ಮಾಡಿದ್ದವರು ಎಂದರು.

ಈ ಕಾರ್ಯಕ್ರಮದಲ್ಲಿ ತಾಲೂಕು ಸಂಘದ ಅಧ್ಯಕ್ಷರು ಟಿ ರಾಜು, ಮಂಜುನಾಥ್ ಡಿ ಜಿಲ್ಲಾ ವರದಿಗಾರರು, ಮಂಜು ಗುರುಗದಹಳ್ಳಿ, ಹಳ್ಳಿ  ಟಿಂಬರ್ ಕಿರಣ್, ಹೇಮಂತ್, ಸಂಘದ ಪದಾಧಿಕಾರಿಗಳು ಹಾಜರಿದ್ದರು.

 

Author:

...
Sushmitha N

Copy Editor

prajashakthi tv

share
No Reviews