ಗುಬ್ಬಿ:
ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಎನ್. ಮತ್ತಿಘಟ್ಟ ಗ್ರಾಮದ ಕೆರೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಮತ್ತಿಘಟ್ಟ ಗ್ರಾಮದ ನಿವಾಸಿ ಜಯರಾಮ್ [40] ಮೃತ ದುರ್ದೈವಿಯಾಗಿದ್ದಾನೆ.
ಬೇಸಿಗೆಯ ಉಷ್ಣತೆ ಹೆಚ್ಚಿದ ಹಿನ್ನೆಲೆ ಕೆರೆಯಲ್ಲಿ ಈಜಲು ಹೋದ ಯುವಕ ಜಯರಾಂ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು ನೀರಿನಲ್ಲಿ ಮುಳುಗಿರುವ ಶಂಕೆಯಲ್ಲಿ ದೇಹ ಪತ್ತೆಗೆ ತೀವ್ರ ಶೋಧ ಕಾರ್ಯ ನಡೆಸಲಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಮತ್ತು ಗುಬ್ಬಿ ಪೊಲೀಸರು ಮುಳುಗು ತಜ್ಞರನ್ನು ಕರೆಸಿ ಮೃತದೇಹದ ಪತ್ತೆಗೆ ಶೋಧ ನಡೆಸಿದ್ದಾರೆ. ಜೊತೆಗೆ ಪೊಲೀಸರು ಸ್ಥಳದಲ್ಲಿಯೇ ಮೋಕ್ಕಾಂ ಹೂಡಿದ್ದಾರೆ.