PAVAGADA - ಪಂಚಾಯ್ತಿಯ ಭ್ರಷ್ಟಾಚಾರದ ವಿರುದ್ಧ 4ನೇ ದಿನಕ್ಕೆ ಕಾಲಿಟ್ಟ ಸದಸ್ಯನ ಪ್ರತಿಭಟನೆ

ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ
ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ
ತುಮಕೂರು

ಪಾವಗಡ ತಾಲೂಕಿನ ರೊಪ್ಪ ಗ್ರಾಮ ಪಂಚಾಯ್ತಿಯಲ್ಲಿ ಭ್ರಷ್ಟಾಚಾರ ಆಗ್ತಿದೆ ಎಂದು ಆರೋಪಿಸಿ ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ ಕಳೆದ ನಾಲ್ಕು ದಿನಗಳಿಂದ ಪಂಚಾಯ್ತಿ ಎದುರು ಟೆಂಟ್‌ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ವೇಳೆ ಭ್ರಷ್ಟಾಚಾರ ಆಗಿರುವ ಬಗ್ಗೆ ಹೊಸ ಹೊಸ ಬಾಂಬ್‌ಗಳನ್ನು ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ ಹೊರಹಾಕ್ತಿದ್ದಾರೆ. ಅಲ್ದೇ ಭ್ರಷ್ಟಾಚಾರದ ಬಗ್ಗೆ ತನಿಖೆ ಆಗುವವರೆಗೂ ಪ್ರತಿಭಟನೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ.

ಕಾನೂನು ಉಲ್ಲಂಘನೆ ಮಾಡಿ ನಡೆದಿರುವ ಲೇಔಟ್ ಮಾಫಿಯಾಗಳು, ಬೇಕಾಬಿಟ್ಟಿ ಬಿಲ್ಲುಗಳು ಮಾಡಿರುವ ಬಗ್ಗೆ ಮತ್ತು 15 ನೇ ಹಣಕಾಸಿನಲ್ಲಿ ಆಗಿರುವವರ ಅವ್ಯವಹಾರ ಬಗ್ಗೆ ದಾಖಲೆಗಳ ಮೂಲಕ ಆಗಿರುವ ಭ್ರಷ್ಟಾಚಾರಗಳನ್ನು ರೊಪ್ಪ ಗ್ರಾಮ ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ ತೆರೆದಿಟ್ಟಿದ್ದಾರೆ. ಇನ್ನು ಪ್ರತಿಭಟನೆ ನಡೆಸಿ ಮೂರು ದಿನಗಳ ಬಳಿಕ ಸ್ಥಳಕ್ಕೆ ತಾಲೂಕು ಪಂಚಾಯ್ತಿ AD ಭೇಟಿ ನೀಡಿ ಪ್ರತಿಭಟನಾನಿರತ ಸದಸ್ಯರ ಬಳಿ ಮಾಹಿತಿ ಪಡೆದಿದ್ರು.

 ಗ್ರಾಮ ಪಂಚಾಯ್ತಿ ಅಧ್ಯಕ್ಷ, ಪಿಡಿಒ ಭ್ರಷ್ಟಾಚಾರದ ಕುರಿತು ಹಲವು ಬಾರಿ ದೂರು ಕೊಟ್ಟರು ಕ್ರಮ ಆಗಿಲ್ಲ, ಹೀಗಾಗಿ ಪ್ರತಿಭಟನೆ ನಡೆಸುತ್ತಿದ್ದೇನೆ.. ಪಂಚಾಯ್ತಿಯಲ್ಲಿ ಭ್ರಷ್ಟಾಚಾರಕ್ಕೆ ಒಂದು ಅಂತ್ಯ ಕಾಣುವವರೆಗೂ ನನ್ನ ಹೋರಾಟ ಮುಂದುವರೆಸುತ್ತೇನೆ ಎಂದು ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ ಆಕ್ರೋಶ ಹೊರಹಾಕಿದ್ರು. ಅಲ್ದೇ ಭ್ರಷ್ಟಾಚಾರ ಆಗಿರುವ ಬಗ್ಗೆ ತನಿಖೆ ಆಗಬೇಕು, ರಾಜಕೀಯ ಮಾಡಿಕೊಂಡಿರೋ ಪಿಡಿಒ ಅವರನ್ನು ಅಮಾನತು ಗೊಳಿಸಬೇಕು ಇಲ್ಲವೇ ವರ್ಗಾವಣೆ ಗೊಳಿಸಿ ಎಂದು ಆಗ್ರಹಿಸಿದ್ರು.

Author:

share
No Reviews