ಪಾವಗಡ :
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾ ಆದಿಗ ಮೀಸಲಾತಿ ಹೋರಾಟಗಾರರಾದ ಕನ್ನಮೇಡಿ ಕೃಷ್ಣಮೂರ್ತಿ ಕಳೆದ 8 ದಿನಗಳಿಂದಲೂ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸುಮಾರು 8 ದಿನಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಕೂಡ ಅಧಿಕಾರಿಗಳು ಮಾತ್ರ ಕ್ಯಾರೆ ಅಂತಿಲ್ಲ. ನಿನ್ನೆ ಏಕಾಏಕಿ ಕರೆಂಟ್ ಕಟ್ ಮಾಡಿದ್ದು ಕತ್ತಲಲ್ಲೇ ಪ್ರತಿಭಟನೆ ಅಹೋರಾತ್ರಿ ಧರಣಿ ನಡೆಸಿದರು ಕೂಡ ಅಧಿಕಾರಿಗಳು ಮಾತ್ರ ಪ್ರತಿಭಟನೆಯತ್ತ ನೋಡ್ತಾನೆ ಇಲ್ಲ.
ಪ.ಜಾತಿ ಮತ್ತು ಪ.ಪಂಗಡದ ಪದವಿ ಪೂರ್ವ ಮೆಟ್ರಿಕ್ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪಕ್ಕದಲ್ಲಿರುವ ಮುಕ್ತಿಧಾಮವನ್ನು ಬದಲಾವಣೆ, ಪ.ಜಾ ಮತ್ತ ಪ. ಪಂಗಡಗಳ ಇನಾಮ್ ಹಾಗೂ ದರಖಾಸ್ತು ಜಮೀನುಗಳನ್ನು ನೊಂದಣಿ ಮಾಡದೆ ತಡೆಹಿಡಿಯುವುದರ ಬಗ್ಗೆ ಹಾಗೂ ಬಗರ್ ಹುಕಂ ಸಾಗುವಳಿ ಅರ್ಜಿಗಳನ್ನು ಪುನರ್ ಪರಿಶೀಲಿಸಿ ಸಮಿತಿ ಮುಂದೆ ಮಂಡನೆ ಮಾಡುವುದರ ಬಗ್ಗೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಹಾ ಆದಿಗ ಮೀಸಲಾತಿ ಹೋರಾಟ ಸಮಿತಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದೆ.
ಇನ್ನು 8 ದಿನದಿಂದಲೂ ಪ್ರತಿಭಟನೆ ನಡೆಸುತ್ತಿದ್ದು ನಮಗೆ ಆಗ್ತಿರೋ ಅನ್ಯಾಯ ಸರಿಪಡಿಸುವವರೆಗೂ ಯಾವುದೇ ಕಾರಣಕ್ಕೂ ಮುಷ್ಕರ ಹಿಂಪಡೆಯಲ್ಲ ಎಂದು ಕನ್ನಮೇಡಿ ಕೃಷ್ಣಮೂರ್ತಿ ಆಕ್ರೋಶ ಹೊರಹಾಕ್ತಿದ್ದಾರೆ. ಜೊತೆಗೆ ಮುಷ್ಕರ ನಡೆಸುತ್ತಿದ್ದರೂ ಕರೆಂಟ್ ಕಟ್ ಮಾಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.