KORATAGERE: ಪಾಳುಬಿದ್ದ ಹಿಂದೂ ಧಾರ್ಮಿಕ ಧತ್ತಿ ಇಲಾಖೆಯ ಸುಂದರ ಗುರುಭವನ

ಕೊರಟಗೆರೆ: 

ಕರ್ನಾಟಕದ ಸುಪ್ರಸಿದ್ಧ ಪುಣ್ಯಕ್ಷೇತ್ರ ಅಂದ್ರೆ ಅದು ಸಿದ್ದರಬೆಟ್ಟ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸಸ್ಯ ಸಂಜೀವಿನಿ ಕ್ಷೇತ್ರವೆಂದೇ ಸುಪ್ರಸಿದ್ಧಿ ಪಡೆದಿರೋ ಸಿದ್ದರಬೆಟ್ಟ ತಪೋಕ್ಷೇತ್ರದಲ್ಲಿ ಸಾಲು ಸಾಲು ಸಮಸ್ಯೆಗಳು ಕಾಣಿಸಿಕೊಂಡಿವೆ .

ಸಿದ್ದರಬೆಟ್ಟದ ದೇವಾಲಯದ ಇಲಾಖೆಯ ಕಾರ್ಯನಿರ್ವಹಣಾ ಅಧಿಕಾರಿ, ಪಾರುಪತ್ತೇದಾರ ಹುದ್ದೆ, ಇಲಾಖೆ ಸಿಬ್ಬಂಧಿಗಳು ಮತ್ತು ಅಡುಗೆ ಭಟ್ರು,ಅಡುಗೆ ಸಹಾಯಕರು ಸೇರಿ ದೇವಾಲಯದ ಅರ್ಚಕನ ಹುದ್ದೆಯು ಖಾಲಿಯಿದ್ದು ಗ್ರೇಡ್-೧ ದೇವಾಲಯ ಈಗ ಗ್ರೇಡ್-೩ರ ಹಂತಕ್ಕೆ ಬಂದು ತಲುಪಿದೆ.

ಸಿದ್ದರಬೆಟ್ಟ ಶ್ರೀಕ್ಷೇತ್ರಕ್ಕೆ ಆಗಮಿಸಿ ಮದುವೆ,ನಾಮಕರಣ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕೆ ಅನುಕೂಲ ಆಗುತ್ತಿದ್ದ ಗುರುಭವನದ ನಿರ್ವಹಣೆ ಇಲ್ಲದೇ 5 ವರ್ಷದಿಂದ ಪಾಳುಬಿದ್ದಿದೆ. ಸುಂದರವಾಗಿ  ಗುರುಭವನದ ಕಟ್ಟಡ ಇದ್ರು ಸಹ ಬಾಗಿಲು ಮತ್ತು ಕಿಟಕಿಗಳು ಮುರಿದಿವೆ. ವಿದ್ಯುತ್ ತಂತಿಗಳು ಮುರಿದು ಬಿದ್ದಿವೆ.  ಶೌಚಾಲಯ ಮತ್ತು ಅಡುಗೆ ಕೋಣೆಯು ಶಿಥಿಲವಾಗಿದ್ದು, ಬೇಲಿಯು ಬೆಳೆದು ನಿಂತಿದೆ. ಅಲ್ದೇ ರಾಶಿ ರಾಶಿ ಕಸದ ಸಮಸ್ಯೆ ಶುರುವಾಗಿದೆ,

ಇನ್ನು,ಗ್ರೇಡ್-೧ ದೇವಾಲಯ ಎನಿಸಿರುವ ಸಿದ್ದೇಶ್ವರ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಣಾ ಅಧಿಕಾರಿಯ ಕಚೇರಿಗೆ ಬೀಗ ಹಾಕಲಾಗಿದೆ.ಕಚೇರಿ ಬೀಗ ತೆಗೆದು ಎಷ್ಟುದಿನ ಆಗಿದೇಯೋ ಆ ದೇವರಿಗೆ ಗೋತ್ತು.ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಸೌಭಾಗ್ಯಮ್ಮ ದಾಸೋಹ ಕೇಂದ್ರಕ್ಕೆ ಮತ್ತೇ ಮನೆಗೇ ಹೋಗುವುದೇ ನಿತ್ಯಕಾಯಕವಾಗಿದೆ. ಅಲ್ದೇ ದಾಸೋಹದ ಭವನದ ಮುಂದೆ ಇರಬೇಕಾದ ಹುಂಡಿ ಕಾರ್ಯ ನಿರ್ವಾಹಣಾ ಅಧಿಕಾರಿಯ ಕಚೇರಿಯ ಕೊಠಡಿಯೊಳಗೆ ಭದ್ರವಾಗಿದೆ.ಇದೊಂದು ಉದಾಹರಣೆ ಸಾಕು ಅಧಿಕಾರಿಗಳ ಕಾರ್ಯವೈಖರಿ ಹೇಗಿದೆ ಎಂದು ತಿಳಿಯೋದಕ್ಕೆ. ಭಕ್ತರ ದಾಸೋಹಕ್ಕೆ ನೀಡುವ  ದೇಣಿಗೆಯ ಕಾಣಿಕೆಹುಂಡಿ ಸುತ್ತಲು ಅನುಮಾನದ ಹುತ್ತ ಆವರಿಸಿದೆ,

ಇದಿಷ್ಟು ಸಮಸ್ಯೆ ಮಾತ್ರವಲ್ಲದೇ ದಾಸೋಹ ಭವನ ಮತ್ತು ಕಚೇರಿಯ ಸಮೀಪ ನೆಪಮಾತ್ರಕ್ಕೆ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಸಿಸಿಟಿವಿಯ ದೃಶ್ಯಗಳು ಯಾರಿಗೂ ಸೀಗೋದಿಲ್ವಂತೆ. ಏಕೆಂದರೇ ಕೋತಿಗಳು ಕಾಟ ಹೆಚ್ಚಿರುವ ಕಾರಣ ಸಿಸಿಟಿವಿಯನ್ನೇ ಕಿತ್ತುಹಾಕಿದೆ ಅಂತಿದ್ದಾರೆ ಅಧಿಕಾರಿಗಳು. ಹೀಗಾಗಿ ಕಚೇರಿ ಮತ್ತು ದಾಸೋಹದ ಭವನದಲ್ಲಿ ಏನೇ ನಡೆದ್ರು ಅದಕ್ಕೆ ವಿಡೀಯೋ ಸಾಕ್ಷಿಯು ಸಿಗೋದೇ ಇಲ್ಲ.

ಇನ್ನು , ಸಿದ್ದರಬೆಟ್ಟದ ಕ್ಷೇತ್ರದಲ್ಲಿರೋ ಸಮಸ್ಯೆಗಳ ಬಗ್ಗೆ ಸ್ಥಳೀಯರು ಮಾಡುತ್ತಿರೋ ಆರೋಪಕ್ಕೆ ದಾಸೋಹ ಭವನ ಹಾಗೂ ಕಚೇರಿ ಪ್ರತ್ಯಕ್ಷವಾಗಿದೆ. ಅಧಿಕಾರಿಗಳ ಕಾರ್ಯವೈಫಲ್ಯ ಮತ್ತು ದಿನಚರಿಯ  ಬಗ್ಗೆ ಸ್ಥಳೀಯರು ಆರೋಪಗಳ ಸುರಿಮಳೆಯನ್ನೇ ಮಾಡುತ್ತಾರೆ.

 

 

 

 

Author:

share
No Reviews