BALLARI: ಬ್ಯಾಂಕ್ ಸಿಬ್ಬಂದಿಯೇ ಬ್ಯಾಂಕ್ನಲ್ಲಿ ನಕಲಿ ಒಡವೆ ಇಟ್ಟು 19 ಲಕ್ಷ ರೂ. ವಂಚನೆ

ಬ್ಯಾಂಕ್ ಸಿಬ್ಬಂದಿಯೇ ಬ್ಯಾಂಕ್ನಲ್ಲಿ ನಕಲಿ ಒಡವೆ ಇಟ್ಟು  19 ಲಕ್ಷ ರೂ. ವಂಚನೆ
ಬ್ಯಾಂಕ್ ಸಿಬ್ಬಂದಿಯೇ ಬ್ಯಾಂಕ್ನಲ್ಲಿ ನಕಲಿ ಒಡವೆ ಇಟ್ಟು 19 ಲಕ್ಷ ರೂ. ವಂಚನೆ
ಬಳ್ಳಾರಿ

ಬಳ್ಳಾರಿ

ನಕಲಿ ಬಂಗಾರ ಇಟ್ಟು ಬ್ಯಾಂಕ್  ಸಿಬ್ಬಂದಿಯಿಂದಲೇ 19 ಲಕ್ಷ ರೂ. ವಂಚನೆ ಎಸಗಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದ ಆಕ್ಸಿಸ್ ಬ್ಯಾಂಕ್‌ನಲ್ಲಿ ನಡೆದಿದ್ದು ಮೂವರು ಬ್ಯಾಂಕ್ ಸಿಬ್ಬಂದಿ ವಿರುದ್ದ ಕೇಸ್‌ ದಾಖಲಾಗಿದೆ. ಅಡಮಾನ ವಿಭಾಗದ ಮುಖ್ಯಸ್ಥ ಕಾರ್ತಿಕ್, ಶ್ರೀನಿವಾಸ್ ಮತ್ತು ಅಕ್ಕಸಾಲಿಗ ರಾಮನಗೌಡ ವಿರುದ್ಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕಳೆದ ವರ್ಷ ಈ ಮೂವರು ಆರೋಪಿಗಳು ಸಿರುಗುಪ್ಪ ಆಕ್ಸಿಸ್ ಬ್ಯಾಂಕ್‌ನಿಂದ ವರ್ಗಾವಣೆಯಾಗಿದ್ದಾರೆ. ವರ್ಗಾವಣೆಯಾಗಿ ಒಂದು ವರ್ಷದ ಬಳಿಕ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಬಾಗೇವಾಡಿ ಗ್ರಾಮದ ಹೇಮಾವತಿ ಅವರ ಹೆಸರಿನಲ್ಲಿ  339 ಗ್ರಾಂ ಬಂಗಾರ ಅಡವಿಟ್ಟು 10.35 ಲಕ್ಷ ರೂ. ಸಾಲ ಪಡೆದಿದ್ದರು. ಆಡಿಟ್‌ ಸಂಸರ್ಭದಲ್ಲಿ ಬಂಗಾರವನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದು ಬಂದಿದೆ. ನಗರದ ಯಾಸೀನ್‌ ೪೨ ಗ್ರಾಂ ಬಂಗಾರ ಅಡಗಿಟ್ಟು ೮೦ ಸಾವಿರ ಸಾಲ ಪಡೆದಿದ್ದರು. ವರ್ಷದ ನಂತರ ಸಾಲದ ಖಾತೆ ಪರಿಶಶೀಲಿಸಿದ್ದಾಗ ಬಂಗಾರದ ಸಾಲ ಕ್ಲೋಸ್‌ ಆಗಿದ್ದು ಕಂಡುಬಂದಿದೆ.

ಮತ್ತೊಂದು ಪ್ರಕರಣದಲ್ಲಿ ಬಸವರಾಜ್ ಎನ್ನುವರು ಚಿನ್ನದ ಸಾಲ ಕಟ್ಟಿದ್ರೂ ಅವರ 4.2 ಗ್ರಾಂ ಉಂಗುರ ಮಾಯವಾಗಿದೆ. ವಿವಿಧ ರೀತಿಯಲ್ಲಿ ಮೂವರು ಆರೋಪಿಗಳು ಒಟ್ಟು 19 ಲಕ್ಷ ರೂ. ವಂಚನೆ ಮಾಡಿರುವುದು ಬ್ಯಾಂಕ್‌ ತನಿಖೆಯಿಂದ ಬೆಳಕಿಗೆ ಬಂದಿದೆ. ವಂಚನೆ ಪ್ರಕರಣವನ್ನು ಬ್ಯಾಂಕಿನ ವ್ಯವಸ್ಥಾಪಕರು ಸಿರಗುಪ್ಪ ಪೋಲೀಸ್‌ ಠಾಣೆಯಲ್ಲಿ ದಾಖಲಿಸಿದ್ದಾರೆ.

 

Author:

...
Editor

ManyaSoft Admin

Ads in Post
share
No Reviews