ದೇಶ:
ಮಿನಿ ಸ್ವೀಡ್ಜರ್ಲ್ಯಾಂಡ್ ಎಂದೇ ಕರೆಯಲ್ಪಡುವ ಜಮ್ಮು-ಕಾಶ್ಮೀರ ನಿನ್ನೆ ಅಕ್ಷರಸಃ ರಕ್ತದೋಕುಳಿಯಿಂದ ತುಂಬಿ ತುಳುಕುತ್ತಿತ್ತು. ತಮ್ಮ ಕುಟುಂಬಗಳೊಂದಿಗೆ ಸುಂದರ ತಾಣ ಜಮ್ಮು-ಕಾಶ್ಮೀರದ ಸೌಂಧರ್ಯ ಸವಿಯಲು ಹೋಗಿದ್ದರು. ಆದರೆ ಅಲ್ಲಿಯೇ ಆ ಯಮರಾಯ ಇವರಿಗಾಗಿ ಕಾದಿದ್ದ ಅನ್ನೋದು ತಿಳಿಯಲೇ ಇಲ್ಲ. ಜಮ್ಮುವಿನ ಪುಹಲ್ಗಾಮ್‌ನಲ್ಲಿ ಚಾರಣಕ್ಕೆ ಬಂದಿದ್ದ ಜನರು ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಚಾರಕ್ಕೆ ಸಿದ್ದವಾಗುತ್ತಿದ್ದರು. ಇನ್ನೇನು ಹೊರಡಬೇಕು ಅಷ್ಟರಲ್ಲಿ ಎಲ್ಲಿಂದಲೋ ಗುಂಡಿನ ಸದ್ದು ಕೇಳಿ ಬಂತು. ನೋಡು ನೋಡುತ್ತಿದ್ದಂತೆ ಹೆಣದ ರಾಶಿಗಳೇ ಉರುಳಿ ಬಿದ್ದಿದ್ದವು. ಎಲ್ಲೆಡೇ ಚೀರಾಟದ ಆಕ್ರಂದನ ಮುಗಿಲು ಮುಟ್ಟಿತ್ತು. ಉಗ್ರರ ದಾಳಿ ಕಂಡು ಪ್ರವಾಸಿಗರು ಒಂದು ಕ್ಷಣ ಬೆಚ್ಚಿಬಿದ್ದರು. ಇಲ್ಲಿ ಏನಾಗುತ್ತಿದೆ ಅನ್ನುವಷ್ಟರಲ್ಲಿ ಹೆಣಗಳ ರಾಶಿಯೇ ಬಿದ್ದಿದ್ದವು.
ಕಳೆದ 30 ವರ್ಷದಲ್ಲಿ ಇದೇ ಮೊದಲ ಬಾರಿ ಇಂತಹ ಘನಘೋರ ಘಟನೆಯೊಂದು ನಡೆದು ಹೋಗಿದೆ. ಇಡೀ ದೇಶವೇ ಒಮ್ಮೆ ನೀರವ ಮೌನಕ್ಕೆ ಜಾರಿತ್ತು. ದೇಶಾದ್ಯಂತ ಪ್ರತಿಯೊಬ್ಬರ ಕಣ್ಣುಗಳು ಒದ್ದೆಯಾಗಿದ್ದವು. ಜಮ್ಮು-ಕಾಶ್ಮೀರದಲ್ಲಿ ಪುಹಲ್ಗಾಮದಲ್ಲಿ ರಕ್ತಸಿಕ್ತ ಚೀರಾಕದ ಧ್ವನಿ ಎಲ್ಲರನ್ನು ತಲ್ಲಣಗೊಳಿಸಿತ್ತು. ಜಾರಣಕ್ಕೆಂದು ಬಂದಿದ್ದ ದೇಶಿ ಮತ್ತು ವಿದೇಶಿಗರು ಸೇರಿದಂತೆ 28 ಜನ ಪ್ರವಾಸಿಗರನ್ನು ಉಗ್ರರು ಹತ್ಯೆಗೈದಿದ್ದಾರೆ. ಈ ಉಗ್ರರ ಅಟ್ಟಹಾಸದಲ್ಲಿ ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಇಲ್ಲಿ ಹಿಂದೂಗಳನ್ನೇ ಟಾರ್ಗೇಟ್ ಮಾಡಿ ಮಾಡಿರುವ ಘನಘೋನ ಹತ್ಯೆ ಇದು. ಚಾರಣಿಗರತ್ತ ದಾವಿಸಿದ ಉಗ್ರರು ಅವರ ಬಳಿ ಬಂದು ನೀವು ಹಿಂದೂ ನಾ ಇಲ್ಲ ಮುಸ್ಲೀಂ ಎಂದು ಧರ್ಮದ ಹೆಸರಲ್ಲಿ ಹತ್ಯೆ ಮಾಡಿರುವುದು ನೀಚ ಮನಸ್ಥಿತಿಯನ್ನು ತೋರುತ್ತದೆ.
ಉಗ್ರರ ದಾಳಿಗೆ ತಮ್ಮ ಪ್ರಾಣ ಕಳೆದುಕೊಂಡಿದ್ದವರ ಹೆಂಡತಿ, ಮಕ್ಕಳು ಗೋಳಿಡುತ್ತಿದ್ದರು. ಹತ್ತಿರಕ್ಕೆ ಬಂದ ಉಗ್ರರನ್ನು ನಮ್ಮನ್ನು ಕೊಂದು ಬಿಡಿ ಎಂದು ಉಗ್ರರ ಬಳಿ ಕೈಚಾಚಿ ಕೇಳಿಕೊಳ್ಳುತ್ತಿದ್ದರು. ಮಕ್ಕಳು ಮಾತ್ರ ಹೆತ್ತವರ ಕಣ್ಣೀರು, ಆ ಗುಂಡಿನ ಸದ್ದನ್ನು ಕೇಳಿ ಕಂಗಾಲಾಗಿದ್ದರು. ಆದರೆ ತಮ್ಮನ್ನು ಕೊಲ್ಲಿ ಎನ್ನುತ್ತಿದ್ದವರನ್ನು ಕಂಡು ಮಾತನಾಡಿಸಿದ ಉಗ್ರರು ನಿಮ್ಮನ್ನು ಕೊಲ್ಲುವುದಿಲ್ಲ ನೀವು ಹೋಗಿ ನಿಮ್ಮ ಮೋದಿಗೆ ಹೇಳಿ ಎಂದು ಹೇಳುತ್ತಿದ್ದರು. ಇತ್ತ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ತಮ್ಮವರನ್ನು ಕಂಡು ಗೋಳಿಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಕಂಡು ಇಡೀ ದೇಶದ ಜನತೆ ಮರುಗಿದರು. ಉಗ್ರರ ರಕ್ತಸಿಕ್ತ ಅಟ್ಟಹಾಸದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹತ್ಯೆಗೀಡಾದ ವರಲ್ಲಿ ಇಬ್ಬರು ವಿದೇಶಿಯರು ಮತ್ತು ಇಬ್ಬರು ಸ್ಥಳೀಯರು ಸೇರಿದ್ದಂತೆ ಉನ್ನತ ಅಧಿಕಾರಿಗಳು ಈ ದಾಳಿಯಲ್ಲಿ ಅಸುನೀಗಿದ್ದಾರೆ ಎನ್ನಲಾಗಿದೆ. ಭಾರತೀಯ ನೌಕಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಹೈದರಬಾದ್ ಮೂಲದ ಗುಪ್ತಚರ ಬ್ಯೂರೋ ಅಧಿಕಾರಿ ಮನೀಶ್ ರಂಜನ್ ಕೂಡ ಹತ್ಯೆಯಾಗಿದ್ದಾರೆ.
ಮೃತರಲ್ಲಿ ಕರ್ನಾಟಕದ ಮೂಲದ ಇಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ಮತ್ತು ಹಾವೇರಿಯ ಭರತ್ ಕೂಡ ಉಗ್ರರ ದಾಳಿಯಲ್ಲಿ ಮೃತರಾಗಿದ್ದಾರೆ. ಇತ್ತ ಮೃತರ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಮತ್ತು ಶಿವಮೊಗ್ಗದ ಅವರ ನಿವಾಸದ ಬಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರವಾಸಿಗರ ಮೇಲೆ ಉಗ್ರಗಾಮಿಗಳು ನಡೆಸಿರುವ ಭೀಕರ ಹೇಯ್ಯಕೃತ್ಯಕ್ಕೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಇತ್ತ ಪುಹಲ್ಗಾಮದಲ್ಲಿ ಭಾರತೀಯ ಸೈನಿಕರು ಕಾರ್ಯ ನಿರತರಾಗಿದ್ದಾರೆ. ಮತ್ತೊಂದೆಡೆ ಉಗ್ರರ ಗುಂಡಿಗೆ ಬಲಿಯಾದವರ ಪಾರ್ಥೀವ ಶರೀರವನ್ನು ಪೋಷಕರಿಗೆ ಹಿಂತಿರುಗಿಸುವ ಕೆಲಸವನ್ನು ಸೈನಿಕರು ಮಾಡುತ್ತಿದ್ದಾರೆ.
ಸೌಧಿ ಅರೇಬಿಯಾದ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿಯವರು ವಿಷಯ ತಿಳಿಯುತ್ತಿದ್ದಂತೆ ಪ್ರವಾಸ ಬಂದ್ ಮಾಡಿ ಭಾರತಕ್ಕೆ ಹಿಂತಿರುಗಿದರು. ನಂತರ ದೆಹಲಿಯ ಕಚೇರಿಯಲ್ಲಿ ಅಜೀತ್ ದೋವಲ್, ಎಸ್. ಜೈಶಂಕರ್ ಅವರೊಂದಿಗೆ ತುರ್ತು ಸಭೆ ನಡಸಿದರು. ಇದೇ ವೇಳೆ ಅಧಿಕಾರಿಗಳಿಂದ ಸಾವು ನೋವಿನ ಬಗ್ಗೆ ಮಾಹಿತಿಯನ್ನು ಕೂಡ ಪಡೆದುಕೊಂಡರು.
ಒಂದು ಕಡೆ ಉಗ್ರರ ದಾಳಿಯಿಂದ ಕಂಗೆಟ್ಟಿರುವ ಜಮ್ಮು-ಕಾಶ್ಮೀರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಮಿಲಿಟರಿ ಕಣ್ಗಾವಲಿನಲ್ಲಿ ಉಗ್ರರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಇತ್ತ ಜಮ್ಮು-ಕಾಶ್ಮೀರದಲ್ಲಿ ಭದ್ರತೆಯ ಹಿನ್ನಲೆಯಲ್ಲಿ ಸಂಪೂರ್ಣ ಬಂದ್ ಮಾಡಲಾಗಿದೆ.