ಶಿರಾ :
ಸಾಗುವಳಿ ಮಾಡ್ತಿರೋ ರೈತರಿಗೆ ಸಾಗುವಳಿ ಪತ್ರ ನೀಡುವಂತೆ ಆಗ್ರಹಿಸಿ ಶಿರಾದ ತಾಲೂಕು ಆಡಳಿತ ಕಚೇರಿ ಮುಂದೆ ನೂರಾರು ಮಂದಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿರಾ ತಾಲ್ಲೂಕು ಇವರು ತಾಲ್ಲೂಕು ಕಛೇರಿಯ ಆವರಣದಲ್ಲಿ ನಡೆಸುತ್ತಿರುವ ಆಹೋರಾತ್ರಿ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ರೈತರ ಬೇಡಿಕೆಯನ್ನು ಶಾಸಕರು ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ ಅವರು ಆಲಿಸಿದರು. ಇನ್ನು ಟಿ.ಬಿ.ಜಯಚಂದ್ರ ಅವರು ಭೇಟಿ ನೀಡಿ ಸಂದರ್ಭದಲ್ಲಿ ತಹಶೀಲ್ದಾರ್ ಸಚ್ಚಿದಾನಂದ ಕೂಚನೂರು.ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್,ಸೇರಿದಂತೆ ವಿವಿಧ ಅಧಿಕಾರಿ ವರ್ಗದವರು ಹಾಗೂ ಯುವ ಕಾಂಗ್ರೆಸ್ ನಗರ ಅದ್ಯಕ್ಷ ಅಂಜನ್ ಕುಮಾರ್ ಹಾಗೂ ತಾಲೂಕು ಯುವ ಅದ್ಯಕ್ಷ ಮಣಿ ಮತ್ತಿತರ ಹಾಜರಿದ್ದರು.
ರೈತರು ಕಳೆದ 50 ವರ್ಷಗಳಿಂದ ಜೀವನೋಪಯಕ್ಕಾಗಿ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಶೇಂಗಾ, ರಾಗಿ,ದ್ವಿದಳ ಧಾನ್ಯಗಳುನ್ನು ಬೆಳೆಯುತ್ತಿದ್ದಾರೆ.. ಆದ್ರೆ ಭೂಮಿಯನ್ನು ಪಹಣಿ ಕಾಲಂನಲ್ಲಿ ಸೇರಿಸದಿರೋದು ರೈತರ ಆತಂಕಕ್ಕೆ ಕಾರಣವಾಗಿದೆ.
ಇನ್ನು ಪಹಣಿಯಲ್ಲಿ ಹೊಸದಾಗಿ ಸೋಲಾ,ಅರಣ್ಯ ನಿವೇಶನ ಇನ್ನು ಮುಂತಾದವುಗಳಿಗೆ ಇಲಾಖೆಯವರು ಪರಿಭಾಷಿಕ ಅರಣ್ಯ ಪ್ರದೇಶ ಎಂದು ಭೂಮಿಯಿಂದ ತೆರವುಗೊಳಿಸಿ ರೈತರಿಗೆ ನಿರಂತರ ಕಿರುಕುಳ ನೀಡ್ತಾ ಬಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ರು.
ಇನ್ನು ಮಿತಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಬಾರದೆಂದು ಘನ ಸರ್ಕಾರ ನಿರ್ದೇಶನನೀಡಿರುತ್ತದೆ.. ಆದ್ರೆ ರೈತರನ್ನು ಒಕ್ಕಲೆಬ್ಬಿಸುತ್ತಿದ್ದು, ರೈತರನ್ನು ನಿರ್ಗತಿಕರನ್ನಾಗಿ ಮಾಡುವ ಹುನ್ನಾರ ಮಾಡ್ತಿ ದ್ದಾರೆ ಎಂದು ಆರೋಪಿಸಿದ್ರು.8ಕಿಲೋಮೀಟರ್ ನಗರ ವ್ಯಾಪ್ತಿಯಲ್ಲಿ ನೂರಾರು ಜನ ರೈತರು ಹತ್ತಾರು ವರ್ಷಗಳಿಂದ ಭೂಮಿಯನ್ನು ಉಳುಮೆ ಮಾಡಿಕೊಂಡು ಜೀವನ ಮಾಡ್ತಿದ್ದಾರೆ..ಅಂತಹ ರೈತರನ್ನು ನಗರಸಭೆಯವರು ಯಾವುದೇ ಭೂಮಿ ಮತ್ತು ಪರಿಹಾರ ನೀಡದೆ ಒಕ್ಕಲೆಬ್ಬಿಸುವುದನ್ನು ಮುಂದುವರೆಸಿರುತ್ತಾರೆ. ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸಬಾರದೆಂದು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ರು.