ಇಂದಿನಿಂದ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

ದ್ವಿತೀಯ ಪಿಯುಸಿ ಪರೀಕ್ಷೆಯು ಇಂದು ಮುಕ್ತಾಯಗೊಂಡಿದ್ದು, ಈ ಬೆನ್ನಲ್ಲೇ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರಿಕ್ಷೆಗಳು ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಕಲ ಸಿದ್ದತೆ ಮಾಡಿಕೊಂಡಿದೆ. 3 ತಿಂಗಳ ಹಿಂದೆಯೇ SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಮಂಡಳಿ ಬಿಡುಗಡೆ ಮಾಡಿದೆ. 2025 ರ SSLC ಪರೀಕ್ಷೆಯು ಮಾರ್ಚ್‌ 21 ರಿಂದ ಶುರುವಾಗಿ ಏಪ್ರಿಲ್‌ 4 ರ ತನಕ ನಡೆಯಲಿವೆ.  

ಕರ್ನಾಟಕದಾದ್ಯಂತ 2025ನೇ ಸಾಲಿನ SSLC ಪರೀಕ್ಷೆಗಳು ಇಂದು ಆರಂಭವಾಗಿದೆ. ಕರ್ನಾಟಕದ 2,818 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ ಎಸ್ಎಲ್‌ಸಿ ಪರೀಕ್ಷೆಗಳು ನಡೆಯಲಿವೆ. 8.96 ಲಕ್ಷ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ. ಇಂದು ಪ್ರಥಮ ಭಾಷೆ ಪರೀಕ್ಷೆ ನಡೆಇಯುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಪರೀಕ್ಷೆ ಆರಂಭವಾಗಿದ್ದು ಮಧ್ಯಾಹ್ನ 1:15 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೊಠಡಿಯಲ್ಲಿ ವೆಬ್‌ಕ್ಯಾಸ್ಟಿಂಗ್‌ ಅಳವಡಿಸಲಾಗಿದ್ದು, ಮೊಬೈಲ್‌ ಫೋನ್‌, ಎಲೆಕ್ಟ್ರಾನಿಕ್‌ ಸಾಧನಗಳು, ಸ್ಮಾಟ್‌ ವಾಚ್‌, ಇಯರ್‌ಫೋನ್‌, ತುಂಬು ತೋಳಿನ ಶರ್ಟ್‌ ಮತ್ತು ಶೂಗಳಿಗೆ ನಿರ್ಬಂಧ ವಿಧಿಸಲಾಗಿದೆ.  

 

Author:

...
Sub Editor

ManyaSoft Admin

share
No Reviews