IPL 2025: ಇಂದು SRH VS DC ಮುಖಾಮುಖಿ

CRICKET : 

ಹೈದರಾಬಾದ್‌ನ ಉಪ್ಪಲ್ ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ.ಅಕ್ಷರ್ ಪಟೇಲ್ ನಾಯಕತ್ವದಡೆಲ್ಲಿ ತಂಡವು ಈ ಗೆಲುವಿನೊಂದಿಗೆ ಪ್ಲೇ ಆಫ್ ಹಾದಿ ಸುಗಮಗೊಳಿಸಲು ಪ್ರಯತ್ನಿಸುತ್ತಿದ್ದರೆ, ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಹೈದರಾಬಾದ್‌ಗೆ ಇದು ನಿರ್ಣಾಯಕ ಪಂದ್ಯವಾದಿಗೆ. ಡೆಲ್ಲಿ  ಕ್ಯಾಪಿಟಲ್ಸ್  ಈ  ಹಿಂದಿನ ಪಂದ್ಯದಲ್ಲಿ  ಸೋತಿದ್ದರೆ, ಹೈದರಾಬಾದ್ ತಂಡ ಕಳಪೆ ಪ್ರದರ್ಶನದಿಂದ ಕಂಗೆಟ್ಟಿದೆ. ಹೀಗಾಗಿ ಉಭಯ  ತಂಡಗಳಿಗೂ  ಈ ಪಂದ್ಯ ಮುಖ್ಯವಾಗಿದೆ.

ಗೆಲುವಿನ ಹಳಿಗೆ ಮರಳುವ ಉಮೇದಿನೊಂದಿಗೆ ಅಕ್ಷರ್‌ ಪಟೇಲ್‌ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಇಂದು ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಸವಾಲು ಎದುರಿಸಲು ಸಜ್ಜಾಗಿದೆ. ಡೆಲ್ಲಿ ತಂಡ ಈ ಹಿಂದಿನ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ 14 ರನ್‌ ಸೋಲು ಕಂಡಿದೆ. ಅಲ್ಲದೆ ಹಿಂದಿನ 5 ಪಂದ್ಯಗಳಲ್ಲಿ ಮೂರರಲ್ಲಿ ಸೋಲು ಕಂಡಿದೆ. ಹಾಗಿದ್ದರೂ ಆರಂಭಿಕ  ಪಂದ್ಯಗಳ ಯಶಸ್ವಿ ಅಭಿಯಾನದಿಂದ  ಪ್ಲೇಆಫ್‌ ಸ್ಪರ್ಧೆಯಲ್ಲಿದೆ. ಮತ್ತೊಂದೆಡೆ  ಪ್ಲೇಆಫ್‌ನಿಂದ ನಿರ್ಗಮಿಸುವ  ಭೀತಿಯಲ್ಲಿರುವ  ಹೈದರಾಬಾದ್‌ ಗೆಲುವಿಗಾಗಿ ಹೋರಾಟ ನಡೆಸಲಿದೆ.

Author:

...
Keerthana J

Copy Editor

prajashakthi tv

share
No Reviews