ತುಮಕೂರು: ತುಮಕೂರಿನಲ್ಲೂ ಸಂಕ್ರಾಂತಿ ಸಡಗರ - ಬೈಲಾಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ

 ಶ್ರೀ ಬೈಲಾಂಜನೇಯ ಸ್ವಾಮಿ ದೇವಸ್ಥಾನ
ಶ್ರೀ ಬೈಲಾಂಜನೇಯ ಸ್ವಾಮಿ ದೇವಸ್ಥಾನ
ತುಮಕೂರು

ತುಮಕೂರು : ಇಂದು ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಡಗರ ಮನೆಮಾಡಿದೆ. ರೈತರು ಸುಗ್ಗಿಯ ಸಂಭ್ರಮದಲ್ಲಿ ಮುಳುಗಿಹೋಗಿದ್ದಾರೆ. ಸೂರ್ಯದೇವ ತನ್ನ ಪಥ ಬದಲಾಯಿಸುವ ದಿನ ಇದಾಗಿದ್ದು, ಜನರು ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ತುಮಕೂರಿನಲ್ಲಿಯೂ ಇಂದು ಸಂಕ್ರಾಂತಿ ಹಬ್ಬದ ಸಡಗರ ಜೋರಾಗಿದ್ದು, ಹನುಮಂತಪುರದ ಶ್ರೀ ಬೈಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ, ಪೂಜೆ ಪುನಸ್ಕಾರಗಳು ನಡೆದವು.

ಸಂಕ್ರಾಂತಿ ಪ್ರಯುಕ್ತ ಬೈಲಾಂಜನೇಯ ಸ್ವಾಮಿಗೆ ನಿಂಬೆ ಹಣ್ಣಿನ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಸಾವಿರಾರು ಭಕ್ತರು ಶ್ರೀ ಬೈಲಾಂಜನೇಯ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಹನುಮಂತಪುರದ ಬೈಲಾಂಜನೇಯ ಸ್ವಾಮಿ ದೇವಸ್ಥಾನ ಗುರು ವ್ಯಾಸರಾಯರೇ ಪ್ರತಿಷ್ಠಾಪಿಸಿದ ೭೩೨ ಆಂಜನೇಯ ಸ್ವಾಮಿಗಳಲ್ಲಿ ಒಂದು.  ಬಹಳ ಶಕ್ತಿಶಾಲಿ ದೇವರು ಅನ್ನೋ ನಂಬಿಕೆ ತುಮಕೂರಿನ ಜನರಲ್ಲಿದೆ. ಹೀಗಾಗಿ ಇವತ್ತು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಭೇಟಿಕೊಟ್ಟ ಸಾವಿರಾರು ಭಕ್ತರು ಆಂಜನೇಯ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

Author:

...
Editor

ManyaSoft Admin

Ads in Post
share
No Reviews