WTC Final 2025 : ಚಾಂಪಿಯನ್ ಪಟ್ಟಕ್ಕೆ ಕೇವಲ 69 ರನ್ ದೂರದಲ್ಲಿರುವ ದಕ್ಷಿಣ ಆಫ್ರಿಕಾ...!

WTC FINAL MATCH : 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಆಸ್ಟೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೂರು ದಿನಗಳ ಆಟ ಮುಗಿದಿದ್ದು, ಪ್ರಸ್ತುತ ದಕ್ಷಿಣ ಆಫ್ರಿಕಾ ಇದರಲ್ಲಿ ಮೇಲುಗೈ ಸಾಧಿಸಿರುವಂತೆ ಕಾಣ್ತಿದೆ.

ಈ ಪಂದ್ಯವನ್ನು ಗೆಲ್ಲಲು ಆಫ್ರಿಕನ್ ತಂಡವು ಇನ್ನೂ 69 ರನ್ ಗಳಿಸಬೇಕಾಗಿದೆ. ಇನ್ನು ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆಲ್ಲಲು ಇನ್ನೂ 8 ವಿಕೆಟ್‌ಗಳ ಅಗತ್ಯವಿದೆ. ಹೀಗಾಗಿ ನಾಲ್ಕನೇ ದಿನದ ಪಂದ್ಯವು ಇನ್ನಷ್ಟು ರೋಮಾಂಚನಕಾರಿಯಾಗುವ ನಿರೀಕ್ಷೆಯಿದೆ. ಆದರೆ ಪಂದ್ಯದ ನಾಲ್ಕನೇ ದಿನದಂದು ಮಳೆ ಬರುವ ಸಾಧ್ಯತೆಗಳಿವೆ ಎಂದು ವರದಿ ಆಗಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಮಳೆಯಾಗುವ ಸಾಧ್ಯತೆಯಿದ್ದು,  ಜೂನ್ 14 ರಂದು ಲಂಡನ್‌ನಲ್ಲಿ ದಿನವಿಡೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ಆಫ್ರಿಕಾ (South Africa) ತಂಡ ತನಗೆ ಅಂಟಿದ್ದ ಚೋಕರ್ಸ್‌ (Chokers) ಪಟ್ಟವನ್ನು ಕಳಚಿ ಚಾಂಪಿಯನ್‌ ಪಟ್ಟ ಅಲಂಕರಿಸುವ ಎಲ್ಲಾ ಸಾಧ್ಯತೆಯಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ (WTC Final) ಕಳೆದ ಬಾರಿ ಚಾಂಪಿಯನ್‌ ಆಸ್ಟ್ರೇಲಿಯಾವನ್ನು (Australia) ಸೋಲಿಸಿ ಐತಿಹಾಸಿಕ ಸಾಧನೆ ನಿರ್ಮಿಸಲು ಕೇವಲ 69 ರನ್‌ಗಳ ಅಗತ್ಯವಿದೆ. ಹೀಗಾಗಿ ಇಂದಿನ ಪಂದ್ಯ ರೋಚಕ ಪಂದ್ಯವಾಗಲಿದೆ.

Author:

...
Sushmitha N

Copy Editor

prajashakthi tv

share
No Reviews