ಗುಬ್ಬಿ : ರೈಲ್ವೆ ಇಲಾಖೆಯಲ್ಲಿ ತುಮಕೂರು ದಾಖಲೆ ಸೃಷ್ಟಿಸುತ್ತೆ ಎಂದ ಸೋಮಣ್ಣ

ಗುಬ್ಬಿ :

ರೈಲ್ವೆ ಗೇಟ್‌ನಿಂದ ಆಗ್ತಿರೋ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವರು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. ಈ ಬೆನ್ನಲ್ಲೇ ನಿನ್ನೆ ತುಮಕೂರಿನ ಮೂರು ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಸಚಿವ ಸೋಮಣ್ಣ, ಇಂದು ಗುಬ್ಬಿ ತಾಲೂಕಿನ ನಿಟ್ಟೂರಿನ ಪುರ ಗ್ರಾಮದಲ್ಲಿ 50.57 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಸಚಿವ ಸೋಮಣ್ಣ ಶಂಕುಸ್ಥಾಪನೆ ನೇರವೇರಿಸಿದರು. ಈ ವೇಳೆ ವೇದಿಕೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲತಾ ದಯಾನಂದ್, ತಹಶೀಲ್ದಾರ್ ಬಿ.ಆರತಿ, ದಿಶಾ ಸಮಿತಿಯ ವೈ.ಎಚ್.ಹುಚ್ಚಯ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಡಾ. ನವ್ಯಾ ಬಾಬು, ಯಶೋಧಮ್ಮ, ರೈಲ್ವೆ ಅಧಿಕಾರಿಗಳಾದ ಅಜಯ್ ಶರ್ಮಾ, ಅಮಿತೇಶ್ ಸಿಂಗ್, ಪ್ರದೀಪ್ ಪುರಿ ಸೇರಿ ಹಲವಾರು ಮಂದಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಸೋಮಣ್ಣ, ಬಹುದಿನದ ಬೇಡಿಕೆಯಾಗಿದ್ದ ರೈಲ್ವೆ ಮೇಲ್ಸೇತುವೆ ಹಾಗೂ ಅಂಡರ್ ಪಾಸ್ ಸೇತುವೆಗಳಿಗೆ ಚಾಲನೆ ಸಿಕ್ಕಿದೆ. ನನ್ನ ಚುನಾವಣೆ ಸಮಯದಲ್ಲಿ ಕೊಟ್ಟ ಮಾತಿನಂತೆ ತಾಲ್ಲೂಕಿನಲ್ಲಿ 16 ಸೇತುವೆ ನಿರ್ಮಿಸಿ ದೇಶದಲ್ಲೇ ದಾಖಲೆ ಸೃಷ್ಟಿಸಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡದೇ ಪಕ್ಷ ಬೇದ ಮರೆತು, ಕೆಲಸಗಳಲ್ಲಿ ಕೇಂದ್ರ ರಾಜ್ಯ ಎಂಬ ತಾರತಮ್ಯ ಇಲ್ಲದೆ ಅಭಿವೃದ್ದಿ ಕೆಲಸ ಮಾಡಬೇಕು ಎಂದು ವಿ.ಸೋಮಣ್ಣ ಮನವಿ ಮಾಡಿದರು.

ಬಳಿಕ ಮಾತನಾಡಿದ ಸೋಮಣ್ಣ, ತುಮಕೂರು ಮುಖ್ಯ ರಸ್ತೆಯಂತೆ ಸುಗಮ ಸಂಚಾರಕ್ಕೆ 28 ಕೋಟಿ ಮಂಜೂರು ಆಗಲಿದ್ದು, ಶೀಘ್ರದಲ್ಲೇ ಗುಬ್ಬಿ ಪಟ್ಟಣ ಸೇರಿ ದ್ವಿಪಥ ರಸ್ತೆ ನಿರ್ಮಾಣ ಆಗಲಿದೆ ಇದರಿಂದ ನನಗೆ ಮತ ಹಾಕಿದ ಮತದಾರರ ಋಣ ತೀರಿಸುತ್ತೇನೆ ಎಂದರು.

ಇನ್ನು ಕಾರ್ಯಕ್ರಮದ ವೇದಿಕೆಯಲ್ಲಿದ್ದ ಸ್ಥಳೀಯ ಮುಖಂಡರಿಗೆ ಬುದ್ಧಿ ಹೇಳಿದ್ದು, ಬಿಜೆಪಿ ಮುಖಂಡರಲ್ಲಿ ಹೊಂದಾಣಿಕೆ ಬರಬೇಕಿದೆ. ಸತ್ಯ ಮಾತಾಡಿದರೆ ರಾಮಾಯಣ ಮಹಾಭಾರತ ಕಥೆ ಕಟ್ಟುವ ಮಂದಿ ಬಹಳ ಜನ ಇದ್ದಾರೆ. ಕಿವಿ ಕಚ್ಚುವ ಮಂದಿಯಿಂದ ದೂರವಿದ್ದು ಎಲ್ಲರ ಜೊತೆ ಹೊಂದಿಕೊಂಡು ಕೆಲಸ ಮಾಡಿ ಎಂದು ಕೆಲವರಿಗೆ ಬುದ್ಧಿವಾದ ಹೇಳಿ ಮತ್ತೇ ಕೆಲವರಿಗೆ ಅಭಿವೃದ್ದಿ ವಿಚಾರದಲ್ಲಿ ತೊಡಕು ಮಾಡಬೇಡಿ ಎಂದು ಪರೋಕ್ಷವಾಗಿ ಸೂಚಿಸಿದರು.

Author:

share
No Reviews