ಕೊರಟಗೆರೆ : ಬೆಂಕಿಗಾಹುತಿಯಾದ ರೈತರ ಮನೆಗೆ ಸಮಾಜ ಸೇವಕ ಮಂಜುನಾಥ್ ಭೇಟಿ

ಸಮಾಜ ಸೇವಕ ಎಂಎನ್ ಜೆ ಮಂಜುನಾಥ ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ಭೇಟಿ ಮಾಡಿರುವುದು.
ಸಮಾಜ ಸೇವಕ ಎಂಎನ್ ಜೆ ಮಂಜುನಾಥ ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ಭೇಟಿ ಮಾಡಿರುವುದು.
ತುಮಕೂರು

ಕೊರಟಗೆರೆ:

ಕೊರಟಗೆರೆ ತಾಲೂಕಿನ ಕಸಬಾ ಹೋಬಳಿಯ ದಿನ್ನೆ ಪಾಳ್ಯದ ರೈತ ತಿಮ್ಮಯ್ಯ ಹಾಗೂ ಬಿ.ಡಿ ಪುರದ ಮಹಿಳೆ ಶಿಲ್ಪಾ ಎಂಬುವವರ ಮನೆಗಳು ಆಕಸ್ಮಿಕ ಬೆಂಕಿಗೆ ಆಹುತಿಯಾಗಿದ್ದು, ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿತ್ತು. ಅಲ್ಲದೇ ಬೆಂಕಿಯಿಂದ ಸುಟ್ಟ ಗಾಯಗಳಿಂದ ಶಿಲ್ಪಾ ಆಸ್ಪತ್ರೆ ಸೇರಿದ್ದರು. ಗೃಹ ಸಚಿವ ಪರಮೇಶ್ವರ್‌ ಅವರ ಸೂಚನೆಯಂತೆ ಬೆಂಕಿಗಾಹುತಿಯಾದ ಮನೆಗಳಿಗೆ ಸಮಾಜ ಸೇವಕ ಮಂಜುನಾಥ್‌ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಈ ವೇಳೆ ಹಂಚಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭೀಮರಾಜು, ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ರವಿಕುಮಾರ್, ಮುಖಂಡರಾದ ಅಶ್ವತಪ್ಪ, ಮಾವತ್ತೂರು ಕುಮಾರ್, ಕೇಬಲ್ ಸಿದ್ದಗಂಗಯ್ಯ ಸೇರಿ ಹಲವರು ಭಾಗಿಯಾಗಿದ್ದರು.

ಕೊರಟಗೆರೆ ತಾಲೂಕಿನ ದೀನ್ನೆಪಾಳ್ಯದ ರೈತ ತಿಮ್ಮಯ್ಯ ಮನೆ ಶಾರ್ಟ್‌ ಸರ್ಕ್ಯೂಟ್‌ನಿಂದ ಹಾನಿಯಾಗಿದ್ದು, ಅವರ ಮನೆಗೆ ಸಮಾಜ ಸೇವಕ ಭೇಟಿ ನೀಡಿ ಪರಿಶೀಲನೆ ನಡೆಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಿ, ಬಳಿಕ ಬಿ.ಡಿ.ಪುರದ ಮಹಿಳೆ ಶಿಲ್ಪಾ ಮನೆಗೆ ಹಾಗೂ ಆಸ್ಪತ್ರೆಯಲ್ಲಿ ಮಹಿಳೆ ಶಿಲ್ಪಾ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಅಲ್ಲದೇ ಎರಡು ಕುಟುಂಬಗಳಿಗೂ ಮಂಜುನಾಥ್‌ ತಲಾ 30 ಸಾವಿರ ಆರ್ಥಿಕ ನೆರವು ನೀಡಿದ್ದಾರೆ.

ಈ ವೇಳೆ ಮಾತನಾಡಿದ ಸಮಾಜ ಸೇವಕ ಎಂಎನ್ ಜೆ ಮಂಜುನಾಥ ಮಾತನಾಡಿ ಗೃಹಸಚಿವರಾದ ಡಾ.ಜಿ.ಪರಮೇಶ್ವರ ಸೂಚನೆಯಂತೆ ನೊಂದ ಕುಟುಂಬದ ಮನೆಗೆ ಭೇಟಿನೀಡಿ ಸಹಾಯ ಹಸ್ತದ ಜೊತೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಸರ್ಕಾರದಿಂದ ಬರುವ ಸಹಾಯ ಧನವನ್ನು ತ್ವರಿತವಾಗಿ  ನೊಂದ ಕುಟುಂಬಕ್ಕೆ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.

Author:

share
No Reviews