Skin Care Tips : ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಬಳಸಿ ಸಿಂಪಲ್‌ ಮನೆಮದ್ದು

ಇತ್ತೀಚಿನ ದಿನಗಳಲ್ಲಿ ಯುವತಿಯರಲ್ಲಿ ಕಣ್ಣಿನ ಸುತ್ತಲೂ ಕಪ್ಪು ಕಲೆ ಅಥವಾ ಡಾರ್ಕ್ ಸರ್ಕಲ್ ತುಂಬಾ ಸಾಮಾನ್ಯವಾಗಿದೆ. ಕಣ್ಣುಗಳ ಕೆಳಗೆ ದೊಡ್ಡ ಕಪ್ಪು ಕಲೆಗಳು ಮುಖದ ಸೌಂದರ್ಯವನ್ನು ಹಾಳುಮಾಡುತ್ತವೆ. ನೀವು ನಿಮ್ಮ ಚರ್ಮವನ್ನು ಚೆನ್ನಾಗಿ ನೋಡಿಕೊಂಡರೂ ಸಹ, ಕಣ್ಣುಗಳ ಕೆಳಗೆ ಕಪ್ಪು ಕಲೆ ನಿಮ್ಮನ್ನು ವಯಸ್ಸಾದ, ದಣಿದ ಮತ್ತು ಮಂದವಾಗಿ ಕಾಣುವಂತೆ ಮಾಡುತ್ತದೆ. ಹೀಗಾಗಿ ಈ ಮನೆಮದ್ದುಗಳನ್ನು ಬಳಸಿ

ರಾತ್ರಿಯಲ್ಲಿ ಕಣ್ಣುಗಳ ಮೇಲೆ ತಣ್ಣನೆಯ ಟೀ ಬ್ಯಾಗ್‌ಗಳನ್ನು ಇಡುವುದರಿಂದ ಡಾರ್ಕ್ ಸರ್ಕಲ್ ತೊಡೆದುಹಾಕಲು ಸಹಾಯ ಮಾಡುತ್ತದೆ.ಅಲ್ದೇ ಚಹಾದಲ್ಲಿ ಕಂಡುಬರುವ ಪಾಲಿಫಿನಾಲ್‌ಗಳು ಮತ್ತು ಕ್ಯಾಟೆಚಿನ್‌ಗಳು ಕಪ್ಪು ವೃತ್ತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎರಡು ಟೀ ಬ್ಯಾಗ್‌ಗಳನ್ನು ತೆಗೆದುಕೊಂಡು ರೆಫ್ರಿಜರೇಟರ್‌ನಲ್ಲಿ ಇರಿಸಿ. ಅದು ಸಂಪೂರ್ಣವಾಗಿ ತಣ್ಣಗಾದ ನಂತರ ಅದನ್ನು ಕಣ್ಣುಗಳ ಮೇಲೆ 10-15 ನಿಮಿಷಗಳ ಕಾಲ ಇಡಿ. ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.

ಚರ್ಮದ ಸಮಸ್ಯೆಗಳಿಗೆ ಕೇಸರಿಯನ್ನು ಆಯುರ್ವೇದ ಔಷಧಿಯಾಗಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಒಂದು ಚಮಚ ಹಸಿ ಹಾಲು ತೆಗೆದುಕೊಂಡು, ಅದಕ್ಕೆ ಕೆಲವು ಎಳೆ ಕೇಸರಿ ಸೇರಿಸಿ, ಸ್ವಲ್ಪ ಸಮಯ ನೆನೆಯಲು ಬಿಡಿ. ಈ ಮಿಶ್ರಣವನ್ನು ಬೆರಳುಗಳ ಸಹಾಯದಿಂದ ಕಪ್ಪು ವೃತ್ತಗಳಿರುವ ಜಾಗಕ್ಕೆ ಹಚ್ಚಿ. ರಾತ್ರಿಯಿಡೀ ಹಾಗೆಯೇ ಬಿಟ್ಟು ಮರುದಿನ ತೊಳೆಯಿರಿ. ಕೊಳಗಾಗಿ ಕಂಡರೆ 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಬಹುದು. ಉತ್ತಮ ಫಲಿತಾಂಶಕ್ಕೆ ಇದನ್ನು ಕೆಲವು ವಾರಗಳವರೆಗೆ ಮುಂದುವರಿಸಿ.

ನಿಂಬೆಹಣ್ಣು ಬ್ಲೀಚಿಂಗ್ ಗುಣಗಳನ್ನು ಹೊಂದಿದೆ ಮತ್ತು ವಿಟಮಿನ್ ʼಸಿʼ ಯಲ್ಲಿ ಸಮೃದ್ಧವಾಗಿದೆ. ಸ್ವಲ್ಪ ಪ್ರಮಾಣದ ನಿಂಬೆ ರಸ ಮತ್ತು ಟೊಮೆಟೊ ರಸವನ್ನು ತೆಗೆದುಕೊಳ್ಳಿ. ಚೆನ್ನಾಗಿ ಮಿಶ್ರಣ ಮಾಡಿ. ಎರಡೂ ರಸಗಳ ಮಿಶ್ರಣವನ್ನು ಹತ್ತಿಯ ಪ್ಯಾಡ್ ಸಹಾಯದಿಂದ ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿ. ಅದು ಒಣಗಿದ ನಂತರ ಅದನ್ನು ಮತ್ತೆ ಹಚ್ಚಿ, 10-15 ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ಪ್ರತಿದಿನವೂ ಅನ್ವಯಿಸಬಹುದು.

 

Author:

...
Editor

ManyaSoft Admin

share
No Reviews