SIRA -
ನೀರಿನ ಮೂಲ ಸಂರಕ್ಷಣೆಗೆ ಸರ್ಕಾರ ಕೋಟಿ ವ್ಯಯಿಸಿ ಯೋಜನೆಗಳನ್ನು ರೂಪಿಸುತ್ತಿದೆ. ಆದ್ರು ಕೂಡ ಜನರಿಗೆ ಶುದ್ಧವಾದ ಸಮರ್ಪಕ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೌದು ಶಿರಾ ತಾಲೂಕಿನ ಹಳ್ಳಿಗಳಿಗೆ ಸಮರ್ಪಕ ನೀರು ಸಿಗದೇ ಸಂಕಷ್ಟ ಪಡುವಂತಾಗಿದೆ. ಶಿರಾ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋಪಿಕುಂಟೆ ಗ್ರಾಮದ ಕಿರುನೀರು ಸರಬರಾಜು ಘಟಕ ಅವ್ಯವಸ್ಥೆಯಿಂದ ಕೂಡಿದೆ. ನೀರಿನ ಯೋಜನೆಗೆ ಕಳಪೆ ಗುಣಮಟ್ಟದ ಪೈಪ್ ಬಳಸಿಕೊಂಡಿರೋದ್ರಿಂದ ನೀರು ನಿರಂತರ ಉಕ್ಕಿ ಪಾಲಾಗುತ್ತಿದೆ. ಆದ್ರೆ ನೀರು ಪೋಲಾಗ್ತಾ ಇದ್ರು ಕೂಡ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಇನ್ನು ಕಳೆದ ಹಲವು ತಿಂಗಳಿಂದ ನೀರಿನ ಪೈಪ್ ಜೋಡಣೆ ಮಾಡಲಾಗಿದೆ, ಆದ್ರೆ ಪೈಪ್‌ಗಳಿಂದ ನೀರು ಉಕ್ಕಿ ಬಂದು ಪೋಲಾಗ್ತಾ ಇದ್ರೆ, ಒಡೆದ ಪೈಪ್‌ಗೆ ಕವರ್ ಸುತ್ತಿ ಹೋಗ್ತಾ ಇದ್ದಾರೆ ಹೊರತು… ಪೈಪ್‌ಗಳನ್ನು ಸರಿಪಡಿಸುವ ಗೋಜಿಗೆ ಹೋಗ್ತಾ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ. ಇದಲ್ಲದೇ ನೀರು ಅಷ್ಟು ಪೋಲಾಗ್ತಾ ಇದ್ರು ಕೂಡ ಅಧಿಕಾರಿಗಳು ಕಂಡು ಕಾಣದಂತೆ ಹೋಗ್ತಾ ಇದ್ದಾರೆ. ನಿರಂತರವಾಗಿ ಪೋಲಾಗ್ತಿರೋ ನೀರನ್ನು ಸಂರಕ್ಷಿಸದಿದ್ರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುವುದು ಖಚಿತ. ಹಾಗಾಗಿ ಅಧಿಕಾರಿಗಳು ಎಚ್ಚೆತ್ತುಕೊಂಡು ವ್ಯರ್ಥವಾಗೋದನ್ನ ಸರಿ ಪಡಿಸಬೇಕಿದೆ.