ಬೇಸಿಗೆ ಆರಂಭವಾಗ್ತಿದ್ದು, ಎಲ್ಲೆಡೆ ಕುಡಿಯಲು ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತೆ.. ಇನ್ನು ಬೇಸಿಗೆ ಆರಂಭಕ್ಕೂ ಮುನ್ನವೇ ಗೃಹ ಸಚಿವ ಡಾ. ಜಿ ಪರಮೇಶ್ವರ್ ತಮ್ಮ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದ್ರು.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ನೀಲಗೊಂಡನಹಳ್ಳಿ ಗ್ರಾಮ ಪಂಚಾಯ್ತಿಯ ಐ.ಕೆ ಕಾಲೋನಿಯಲ್ಲಿ ಸುಮಾರು 10 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕನ್ನು ನಿರ್ಮಾಣ ಮಾಡಲಾಗಿದ್ದು, ಪರಮೇಶ್ವರ್ ಅವರು ಉದ್ಘಾಟನೆ ಮಾಡಿದ್ರು. ಇನ್ನು ಶುದ್ಧ ನೀರಿನ ಘಟಕ ಉದ್ಘಾಟನೆ ಮಾಡೋದು ಐ.ಕೆ ಕಾಲೋನಿ ಜನರ ಬಹುದಿನಗಳ ಬೇಡಿಕೆಯಾಗಿತ್ತು.. ಶುದ್ಧ ನೀರಿಲ್ಲದೇ ಜನರು ಪರದಾಡುತ್ತಿದ್ದರು… ಹೀಗಾಗಿ ಕೆಆರ್ ಐಡಿಎಲ್ ಇಲಾಖೆಯಿಂದ ಸುಮಾರು 10 ಲಕ್ಷ ಅನುದಾನವನ್ನು ನೀಡಲಾಗಿದ್ದು, ಅನುದಾನವನ್ನು ಬಳಸಿಕೊಂಡು ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಲಾಗಿದೆ… ಇದೀಗ ಕೆ.ಡಿ ಪಿ ಮೀಟಿಂಗ್ ಹಾಗೂ ವಿವಿಧ ಕಾರ್ಯಕ್ರಮಗಳ ನಿಮಿತ್ತ ತಮ್ಮ ಕೊರಟಗೆರೆ ಕ್ಷೇತ್ರಕ್ಕೆ ಬಂದಿದ್ದ ಗೃಹ ಸಚಿವ ಪರಮೇಶ್ವರ್ KDP ಸಭೆ ಬಳಿಕ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟನೆ ಮಾಡಿದ್ರು.
ಇನ್ನು ಐ.ಕೆ.ಕಾಲೋನಿಗೆ ಪರಮೇಶ್ವರ್ ಅವರು ಬರ್ತಾ ಇದ್ದಂತೆ ಗ್ರಾಮ ಪಂಚಾಯ್ತಿ ಸದಸ್ಯರು, ಸ್ಥಳೀಯ ನಿವಾಸಿಗಳು ಪಟಾಕಿ ಸಿಡಿಸಿ, ಪರಮೇಶ್ವರ್‌ಗೆ ಹೂವಿನ ಹಾರ ಹಾಕಿ ಸನ್ಮಾನ ಮಾಡಿದ್ರು. ಉದ್ಘಾಟನೆ ವೇಳೆ ಡಿಸಿ ಶುಭ ಕಲ್ಯಾಣ , ಜಿಲ್ಲಾ ಪಂಚಾಯತ್ ಸಿಇಒ ಪ್ರಭು ಸೇರಿ ಹಲವರು ಭಾಗಿಯಾಗಿದ್ರು..