TUMAKURU: ಕೆಎಎಸ್ ಪರೀಕ್ಷೆ ಅನ್ಯಾಯ ಸರಿಪಡಿಸಿ ಎಂದು ಸಿಎಂಗೆ ಪತ್ರ ಬರೆದ ಸಿದ್ದಲಿಂಗ ಸ್ವಾಮೀಜಿ

 ಸಿದ್ದಗಂಗಾ ಮಠದ ಸಿದಲಿಂಗ ಸ್ವಾಮಿ
ಸಿದ್ದಗಂಗಾ ಮಠದ ಸಿದಲಿಂಗ ಸ್ವಾಮಿ
ತುಮಕೂರು

ತುಮಕೂರು: 

ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕೆಎಎಸ್ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆದ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಸಿದ್ದಗಂಗಾ ಮಠದ ಸಿದಲಿಂಗ ಸ್ವಾಮೀಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಅನುವಾದದಲ್ಲಿ ತಜ್ಞರಾದವರು ಹಾಗೂ ಕನ್ನಡ ಭಾಷೆಯಲ್ಲಿ ಪ್ರಾವೀಣ್ಯ ಹೊಂದಿದ ತಜ್ಞರ ಸಮಿತಿ ರಚಿಸಿ ಗ್ರಾಮೀಣ ವಿದ್ಯಾರ್ಥಿಗಳ ಹಿತ ರಕ್ಷಿಸಬೇಕು. ಪ್ರಶ್ನೆಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವಾಗ ಆಗಿರುವ ತಪ್ಪಿನಿಂದ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿರುವ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಆಗಿರುವ ತೊಂದರೆಯನ್ನು ಬಗೆಹರಿಸುವಂತೆ ಸ್ವಾಮೀಜಿ ಕೋರಿದ್ದಾರೆ.

ಪ್ರಶ್ನೆಪತ್ರಿಕೆಗಳಲ್ಲಿ ಅನೇಕ ದೋಷಗಳು ಉಂಟಾಗಿವೆ. ಪ್ರಶ್ನೆಗಳು ಅರ್ಥವಾಗದೆ ಅನುತ್ತೀರ್ಣರಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿ ಮುಂದುವರಿದರೆ ಗ್ರಾಮೀಣ ಮಕ್ಕಳ ಭವಿಷ್ಯ ಹಾಳಾಗಲಿದೆ. ಮುಂದಿನ ದಿನಗಳಲ್ಲಿ ಇಂತಹವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಿದ್ದಲಿಂಗ ಸ್ವಾಮೀಜಿ ಮನವಿ ಮಾಡಿದ್ದಾರೆ

Author:

...
Sub Editor

ManyaSoft Admin

Ads in Post
share
No Reviews