ಶಿವಮೊಗ್ಗ : ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಶರಾವತಿ ಮುಳುಗಡೆ ಸಂತ್ರಸ್ಥರಿಂದ ಪ್ರತಿಭಟನೆ

ಶಿವಮೊಗ್ಗ :

ಎಸಿ ಕಚೇರಿಯಿಂದ ರೈತರಿಗೆ ನೋಟಿಸ್‌ ನೀಡುತ್ತಿರೋದನ್ನು ಖಂಡಿಸಿ ಶರಾವತಿ ಮುಳುಗಡೆ ಸಂತ್ರಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿರುವ ಘಟನೆ ಶಿವಮೊಗ್ಗ ಜಿಲ್ಲಾಧಿಕಾರಿ ಮುಂಭಾಗದಲ್ಲಿ ನಡೆದಿದೆ.

ಶರಾವತಿ ಡ್ಯಾಂ ಗಾಗಿ ತಮ್ಮ ಭೂಮಿಯನ್ನು ನೀಡಿದ್ದವರಿಗೆ ಬೇರೆ ಕಡೆ ಭೂಮಿಯನ್ನು ಕೊಟ್ಟು ಕೆಲವರಿಗೆ ಹಕ್ಕು ಪತ್ರವನ್ನು ನೀಡಲಾಗಿತ್ತು, ಭೂಮಿಯನ್ನೇ ನಂಬಿಕೊಂಡು ಇಲ್ಲಿನ ಜನರು ಸಾಗುವಳಿ ಮತ್ತು ವ್ಯವಸಾಯ ಮಾಡುತ್ತಿದ್ದಾರೆ. ಆದರೆ ಮೇಲಿಂದ ಮೇಲೆ ಎಸಿ ಕಚೇರಿಯಿಂದ ಮುಳುಗಡೆ ಸಂತ್ರಸ್ಥರಿಗೆ ನೋಟಿಸ್‌ ನೀಡುತ್ತಿದ್ದು. ಇದನ್ನು ಖಂಡಿಸಿ ಇಂದು ರೈತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರೂ, ಈ ವೇಳೆ ಸ್ಥಳೀಯ ಪೊಲೀಸರು ತಡೆಯಲೂ ಎಷ್ಟೇ ಪ್ರಯತ್ನಿಸಿದರೂ ಸಹ ರೈತರು ಬ್ಯಾರಿಕೇಡ್‌ ಗಳನ್ನು ಕಿತ್ತಾಕಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ರೈತರು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಡಿಸಿ ಕಚೇರಿಗೆ ಬೀಗ ಹಾಕಲಾಗಿತ್ತು. ಇನ್ನು ದಶಕಗಳಿಂದಲೂ ಶರಾವತಿ ಸಂತ್ರಸ್ಥರಿಗೆ ಸೂಕ್ತವಾದ ಪರಿಹಾರ ಸಿಕ್ಕಿಲ್ಲ, ಇಂದು ರೈತರು ಪರಿಹಾರ ಒದಗಿಸುವಂತೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

Author:

...
Editor

ManyaSoft Admin

Ads in Post
share
No Reviews