ಶಿರಾ : ಬೀದಿಬದಿ ವ್ಯಾಪಾರ | ವಾಹನ ಸಂಚಾರಕ್ಕೆ ಸಂಚಕಾರ

ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸುತ್ತಿರುವುದು.
ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸುತ್ತಿರುವುದು.
ತುಮಕೂರು

ಶಿರಾ:

ತುಮಕೂರು ಜಿಲ್ಲೆಯ ಶಿರಾ ನಗರ ದಿನೇದಿನೇ ಬೃಹದಾಕಾರವಾಗಿ ಬೆಳೆಯುತ್ತಿದೆ. ಹೀಗಾಗಿ ನಗರದಲ್ಲಿ ಯಾವಾಗಲೂ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ. ಮತ್ತೊಂದು ಕಡೆ ಪಾರ್ಕಿಂಗ್‌ ಸಮಸ್ಯೆ ಹಾಗೂ ಟ್ರಾಪಿಕ್‌ ಜಾಮ್ ಕೂಡ ಶಿರಾ ನಗರದ ಜನರನ್ನ ದೊಡ್ಡ ಮಟ್ಟದಲ್ಲಿ ಕಾಡ್ತಿದೆ. ಈ ನಡುವೆ ಬೀದಿಬದಿ ವ್ಯಾಪಾರಿಗಳಿಂದ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ. ರಸ್ತೆ ಬದಿಯಲ್ಲೇ ತರಕಾರಿ, ಹಣ್ಣುಹಂಪಲು, ಕೂಲಿಂಗ್‌ ಗ್ಲಾಸ್‌ ಅಂತಾ ಹಲವು ಅಂಗಡಿಗಳನ್ನು ಹಾಕಿಕೊಳ್ಳುತ್ತಿರುವುದರಿಂದ ಸಮಸ್ಯೆ ದುಪ್ಪಟ್ಟಾಗುತ್ತದೆ.

ಹಿಂದೆಲ್ಲ ಮಂಗಳವಾರವಷ್ಟೇ ಕಾಣಸಿಗುತ್ತಿದ್ದ ಬೀದಿ ವ್ಯಾಪಾರಿಗಳ ದರ್ಶನ ಇಗ ನಿತ್ಯವೂ ಆಗುತ್ತಿದೆ. ಸಾರ್ವಜನಿಕರಿಂದ ದೂರು ಹೆಚ್ಚಾದಾಗ ಮಾತ್ರ ಒಮ್ಮೆ ಅವರನ್ನ ತೆರವುಗೊಳಿಸುವ ಕೆಲಸವಾಗುತ್ತಿದೆ. ಕೆಲ ದಿನಗಳ ಬಳಿಕ ಇವರೆಲ್ಲ ಮತ್ತೆ ಅಲ್ಲೇ ಪ್ರತ್ಯಕ್ಷವಾಗ್ತಿದ್ದಾರೆ. ಹೀಗಾಗಿ ವಾಹನಗಳು ಮಾತ್ರವಲ್ಲದೇ ಪಾದಚಾರಿಗಳು ನಡೆದಾಡಲು ಕೂಡ ಹಿಂಸೆಪಡುವಂತ ಸ್ಥಿತಿ ನಿರ್ಮಾಣವಾಗಿದೆ.

ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ವಲಯ ನಿರ್ಮಿಸಿಕೊಡುವ ಪ್ರಸ್ತಾವನೆಯಿದ್ದು, ಇದು ಕಾರ್ಯರೂಪಕ್ಕೆ ಬರುವುದು ಗಗನ ಕುಸುಮವಾಗಿದೆ. ರಸ್ತೆಬದಿಯಲ್ಲಿ, ದೇವಸ್ಥಾನದ ಪಕ್ಕ ಹೀಗೆ ರೋಡ್‌ನ ಅಲ್ಲಲ್ಲಿ ತರಕಾರಿ, ಮೆಣಸು, ದಿನಬಳಕೆಯ ಅಡುಗೆ ಪದಾರ್ಥಗಳನ್ನು ಮಾರಾಟ ಮಾಡುವವರು ಹೆಚ್ಚಾಗಿದ್ದಾರೆ. ಆಗಾಗ್ಗೆ ಅವರನ್ನು ಎಬ್ಬಿಸುವುದು, ವಾರದ ಬಳಿಕ ಮತ್ತೆ ಅದೇ ಜಾಗದಲ್ಲಿ ಕುಳಿತುಕೊಳ್ಳುವುದು ಇದೆಲ್ಲ ಪದೇಪದೇ ನಡೆಯುತ್ತಾ ಬಂದಿದೆ. ಈ ನಡುವೆ ನಗರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಲವು ಭರವಸೆಗಳನ್ನು ಕೂಡ ಕೊಡಲಾಗಿದೆ. ಆದರೆ ಬೀದಿಬದಿ ವ್ಯಾಪಾರಿಗಳಿಗೆ ಮಾತ್ರ ಸೂಕ್ತ ಜಾಗದ ಗುರುತು ಇನ್ನೂ ಆಗಿಲ್ಲ.

ಇನ್ನು ನಗರಸಭೆ ತರಕಾರಿ ಮಾರುಕಟ್ಟೆಗೆ ಜಾಗ ಗುರುತಿಸುವ ಕಾರ್ಯ ಕೂಡ ಇನ್ನೂ ಆಗಿಲ್ಲ. ಪ್ರತಿವರ್ಷ ನಗರಸಭೆ ನೆಲಕ್ಕೆ ಕರ ವಸೂಲಿ ಎಂದು ಹರಾಜು ಮೂಲಕ ಲಕ್ಷಾಂತರ ಆದಾಯ ಪಡೆಯುತ್ತಿದೆ. ಆದರೆ ನಗರದಲ್ಲಿ ಬೀದಿಬದಿ ಮತ್ತು ತರಕಾರಿ ವ್ಯಾಪಾರಿಗಳಿಗೆ ಸೂಕ್ತವಾದ ಸ್ಥಳ ಗುರುತಿಸಿಲ್ಲ. ಇದರಿಂದ ದಿನನಿತ್ಯ ಪೊಲೀಸ್ ಇಲಾಖೆಗೆ ಈ ಬೀದಿಬದಿ ವ್ಯಾಪಾರತಸ್ಥರನ್ನು ತೆರವುಗೊಳಿಸುವ ಕಾರ್ಯ ತಪ್ಪುತ್ತಿಲ್ಲ. ನಗರಸಭೆ ಅಡಳಿತದ ನಿರ್ಲಕ್ಷ್ಯದಿಂದ ಒಂದು ಕಡೆ ಪೊಲೀಸ್ ಇಲಾಖೆಗೆ ತಲೆನೋವು ಹೆಚ್ಚಾಗಿದ್ದರೆ, ಇನ್ನೊಂದು ಕಡೆ ನಗರವಾಸಿಗಳು ಕೂಡ ದಿನನಿತ್ಯ ಪರದಾಡುವಂತಾಗಿದೆ.

Author:

...
Editor

ManyaSoft Admin

Ads in Post
share
No Reviews