ಶಿರಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣವನ್ನು ನಗರಸಭೆ ಪೌರ ಕಾರ್ಮಿಕರು ಸ್ವಚ್ಚಮಾಡುತ್ತಿರುವುದು.ತುಮಕೂರು
ಶಿರಾ:
ಹೈಪರ್ ಲೋಕಲ್ ಕಾನ್ಸೆಪ್ಟ್ ಮೇಲೆ ಪ್ರಜಾಶಕ್ತಿ ಮಾಧ್ಯಮ ಆರಂಭವಾಗಿದ್ದು, ಪ್ರತಿ ಹಳ್ಳಿಗಳ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದೆ. ಸಮಸ್ಯೆಗಳ ವರದಿಯನ್ನು ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆಯುವ ಕೆಲಸವನ್ನು ಪ್ರಜಾಶಕ್ತಿ ಮಾಡುತ್ತಿದೆ. ಇದರಂತೆ ಶಿರಾ ನಗರದ 21ನೇ ವಾರ್ಡ್ನಲ್ಲಿರೋ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಕಸದ ಸಮಸ್ಯೆ ತಾಂಡವಾಡುತ್ತಿದ್ದು, ಇದರಿಂದ ಬರುವ ರೋಗಿಗಳಿಗೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ವರದಿ ಮಾಡಿದ್ದ ಬೆನ್ನಲ್ಲೇ ಅಲರ್ಟ್ ಆದ ನಗರ ಸಭೆ ಅಧಿಕಾರಿಗಳು, ಆಸ್ಪತ್ರೆ ಆವರಣದಲ್ಲಿ ಬಿದ್ದಿದ್ದ ಕಸವನ್ನು ಸಂಪೂರ್ಣವಾಗಿ ತೆರವು ಮಾಡಿದ್ದಾರೆ.
ಹೌದು ಕಳೆದ ವಾರವಷ್ಟೇ ಪ್ರಜಾಶಕ್ತಿಯಲ್ಲಿ ನಗರದ 21ನೇ ವಾರ್ಡ್ನಲ್ಲಿರೋ ಆಸ್ಪತ್ರೆ ಆವರಣದಲ್ಲಿದ್ದ ಕಸದ ಸಮಸ್ಯೆ ಬಗ್ಗೆ ವಿಸ್ತೃತ ವರದಿ ಮಾಡಿತ್ತು. ಇಲ್ಲಿನ ಕಸದ ಸಮಸ್ಯೆಯಿಂದಾಗಿ ಚಿಕಿತ್ಸೆಗೆಂದು ಬರುವ ರೋಗಿಗಳು ಕಾಯಿಲೆಯನ್ನು ಹತ್ತಿಸಿಕೊಂಡು ಹೋಗುವ ಪರಿಸ್ಥಿತಿ ಇತ್ತು. ಹೀಗಾಗಿ ಕಸದ ಸಮಸ್ಯೆಯನ್ನು ಪರಿಹಾರ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದರು, ಕೂಡ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿರಲಿಲ್ಲ, ಆದರೆ ಪ್ರಜಾಶಕ್ತಿ ವರದಿ ಬೆನ್ನಲ್ಲೇ ಕಸದ ಸಮಸ್ಯೆಗೆ ಮುಕ್ತಿ ನೀಡಿದ್ದರಿಂದ ರೋಗಿಗಳು ಹಾಗೂ ಸಾರ್ವಜನಿಕರು ಪ್ರಜಾಶಕ್ತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.