ಶಿರಾ :
ಕಾಲ ಕಾಲಕ್ಕೆ ಮಳೆಯಾಗಬೇಕೆಂದರೆ ಮರ- ಗಿಡಗಳು ಹೆಚ್ಚಾಗಿ ಇರಬೇಕು. ಇಲ್ಲವಾದರೆ ಮಳೆ ಇಲ್ಲದೇ ಬರ ಪೀಡಿತ ಪ್ರದೇಶವಾಗಲಿದೆ. ಹೇಳಿ ಕೇಳಿ ಶಿರಾ ತಾಲೂಕು ಬರ ಪೀಡಿತ ಪ್ರದೇಶಕ್ಕೆ ಸೇರಲಿದೆ. ಅರಣ್ಯ ಇಲಾಖೆ ಗಿಡ- ಮರಗಳನ್ನು ನೆಡುವ ಕೆಲಸಕ್ಕೆ ಮುಂದಾಗಿದೆ. ಆದರೆ ಶಿರಾ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗ್ತಾ ಇದ್ದು, ಗಿಡಗಳು ಬಾಡಿ ಹೋಗ್ತಾ ಇರೋ ದೃಶ್ಯಗಳು ಕಂಡು ಬಂದಿದೆ. ನರೇಗಾ ಕಾಮಗಾರಿ ಹೆಸರಲ್ಲಿ ಸರ್ಕಾರಿ ಜಾಗದಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ನೆಟ್ಟಿದೆ. ಆದರೆ ನಿರ್ವಹಣೆ ಇಲ್ಲದೇ ಗಿಡಗಳು ಬಾಡಿ ಹೋಗ್ತಾ ಇವೆ.
ಶಿರಾ ತಾಲೂಕಿನ ಮಾಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನ್ಯಾಯಗೆರೆ ಗೇಟ್ ಬಳಿ ಶಿರಾ- ಮಧುಗಿರಿ ರಸ್ತೆಯ ಬದಿ ಹಾಗೂ ಸರ್ಕಾರಿ ಜಾಗದಲ್ಲಿ 4 ಲಕ್ಷದ 90 ಸಾವಿರ ವೆಚ್ಚದಲ್ಲಿ ನೂರಾರು ಗಿಡಗಳನ್ನು ಹಾಕಲಾಗಿದೆ, ಆದರೆ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದಾಗಿ ಗಿಡಗಳ ನಿರ್ವಹಣೆ ಇಲ್ಲ. ಹೀಗಾಗಿ ಬಿಸಿಲಿನ ತಾಪಮಾನ ಹೆಚ್ಚಳವಾಗಿ ಮರ ಗಿಡಗಳು ಒಣಗಿ ಹೋಗುತ್ತಿವೆ. ಇದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಮರಗಳಾಗುವ ಗಿಡಗಳು ನಾಶವಾಗುತ್ತಿವೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ,
ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಯಾಗಿ ನಿರ್ವಹಣೆ ಮಾಡುವ ಮೂಲಕ ಒಣಗಿ ಹೋಗ್ತಿರೋ ಗಿಡಗಳನ್ನು ರಕ್ಷಣೆ ಮಾಡಬೇಕಿದೆ.