ಶಿರಾ: ಒತ್ತುವರಿದಾರರಿಗೆ ಪಂಚಾಯ್ತಿ ಸದಸ್ಯರ ಬೆಂಬಲ..? ರಾತ್ರೋ ರಾತ್ರಿ ಚರಂಡಿ ಕಾಮಗಾರಿ

ರಸ್ತೆಗಳಲ್ಲಿ  ಚರಂಡಿಗಳನ್ನು ತೆಗೆಸಿರುವುದು.
ರಸ್ತೆಗಳಲ್ಲಿ ಚರಂಡಿಗಳನ್ನು ತೆಗೆಸಿರುವುದು.
ತುಮಕೂರು

ಶಿರಾ:

ಶಿರಾ ತಾಲೂಕಿನ ಗೌಡಗೆರೆ ಹೋಬಳಿ ವ್ಯಾಪ್ತಿಯ ತಾವರೆಕೆರೆ ಗ್ರಾಮದ ರಸ್ತೆ ಹೆದ್ದಾರಿಯಾಗಿ ಮಾರ್ಪಡುತ್ತಿದೆ. ಆದರೆ ಈ ಹೆದ್ದಾರಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಪಿಡಿಒ ಅಧಿಕಾರಿಗಳು ರಾತ್ರೋ ರಾತ್ರಿ ರಸ್ತೆಯ ಬಳಿ ಚರಂಡಿ ತೆಗೆದಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಡ್ತಾ ಇದೆ. ತಾವರೆಕೆರೆಯಿಂದ ಹುಲಿಯೂರು ದುರ್ಗ ಹೋಗುವ ರಸ್ತೆ ಈ ಹಿಂದೆ ಎಂಡಿಆರ್‌ ರಸ್ತೆ ಆಗಿತ್ತು. ಆದರೀಗ ಹೆದ್ದಾರಿಗೆ ಅನುಮೋದನೆ ಸಿಕ್ಕಿದೆ, ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಪಿಡಿಒ ಅಧಿಕಾರಿಗಳು ರಾತ್ರೋ ರಾತ್ರಿ ರಸ್ತೆ ವ್ಯಾಪ್ತಿಗೆ ಸೇರುವ ಜಾಗದಲ್ಲೇ ಚರಂಡಿಯನ್ನು ತೆಗೆದಿದ್ದು, ಇದರಿಂದ ಒತ್ತುವರಿದಾರರಿಗೆ ಗ್ರಾಮ ಪಂಚಾಯ್ತಿ ಸದಸ್ಯರೇ ಬೆಂಬಲಕ್ಕೆ ನಿಂತಂತಾಗಿದೆ, ಈ ರಸ್ತೆಯು ರಥೋತ್ಸವ ನಡೆಯುವ ರಸ್ತೆಯಾಗಿದ್ದು, ರಸ್ತೆ ಬದಿಯ ನಿವಾಸಿಗಳು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರಂತೆ, ಅವರನ್ನು ರಕ್ಷಿಸುವ ಸಲುವಾಗಿಯೇ ರಾತ್ರಿ ವೇಳೆಯೇ ಚರಂಡಿಯನ್ನು ತೆಗೆದಿದ್ದಾರೆ ಎಂದು ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರು ಆರೋಪ ಮಾಡುತ್ತಿದ್ದಾರೆ.

ಇನ್ನು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾರು ಕೂಡ ತಲೆಕೆಡಿಸಿಕೊಳ್ತಾ ಇಲ್ಲ. ಅಲ್ಲದೇ ಪಿಡಿಒ ಅಧಿಕಾರಿಗಳಿಗೆ ಕೇಳಿದರೆ ಇದು ನಮ್ಮ ವ್ಯಾಪ್ತಿಗೆ ಬರಲ್ಲ ಅಂತಾ ಹೇಳ್ತಾ ಇದ್ದಾರೆ. PWD ಅಧಿಕಾರಿಗಳನ್ನು ಕೇಳೋಣ ಅಂದರೆ ಅವರು ಸರ್ಕಾರಿ ಸಿಮ್‌ಗಳನ್ನೇ ಯೂಸ್‌ ಮಾಡ್ತಾ ಇಲ್ಲ.  ಸಮಸ್ಯೆ ಹೇಳಿಕೊಳ್ಳೋಣ ಅಂದರೆ ಸಂಜೆ 5:30 ನಂತರ ಸಿಗೋದಿಲ್ಲ. ಬೆಳಗ್ಗೆ 10:30 ನಂತರ ಸಿಗ್ತಾರೆ. ಹೀಗೆ ಆದರೆ ನಾವು ಯಾರ ಬಳಿ ನಮ್ಮ ಸಮಸ್ಯೆ ಹೇಳಿಕೊಳ್ಳೋಣ ಎಂದು ಸ್ಥಳೀಯರಾದ ಗುಡ್ಡದ ರಂಗಪ್ಪ ಆಕ್ರೋಶ ಹೊರಹಾಕಿದರು.  ಇನ್ನು 2022ರಲ್ಲಿ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದ್ದು, ರಸ್ತೆ ವ್ಯಾಪ್ತಿಯಿಂದ ಎಷ್ಟು ದೂರದಲ್ಲಿ ಕಟ್ಟಡ, ಚರಂಡಿ ಇರಬೇಕು ಎಂದು ಆದೇಶ ನೀಡಿದರು ಕೂಡ ಗ್ರಾಮ ಪಂಚಾಯ್ತಿ ಅಧಿಕಾರಿಗಳು ದುರುದ್ದೇಶದಿಂದ ಒತ್ತುವರಿದಾರರಿಗೆ ಅನುಕೂಲ ಮಾಡಿಕೊಡಲೆಂದೆ ರಾತ್ರೋ ರಾತ್ರಿ ರಸ್ತೆ ಲಿಮಿಟ್‌ನಲ್ಲಿ ಜೆಸಿಬಿ ಮೂಲಕ ಚರಂಡಿ ತೆಗೆಸಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದರು.

ಇನ್ನು ಈ ಬಗ್ಗೆ PDO ಅಧಿಕಾರಿ ನಾಗರಾಜು ಪ್ರತಿಕ್ರಿಯೆ ನೀಡಿದ್ದು, ರಥೋತ್ಸವದ ಪ್ರಯುಕ್ತ ಚರಂಡಿಗಳನ್ನು ಕ್ಲೋಸ್‌ ಮಾಡಿ ಅಂಗಡಿಗಳನ್ನು ನಿರ್ಮಾಣ ಮಾಡಿದ್ದಾರೆ. ರಥೋತ್ಸವ ಮುಗಿದ ಬಳಿಕ ಪಂಚಾಯ್ತಿ ಅಧ್ಯಕ್ಷರು, ಸದಸ್ಯರ ಒಪ್ಪಿಗೆ ಪಡೆದು ಮುಚ್ಚಿ ಹೋಗಿರುವ ಚರಂಡಿಗಳನ್ನು ತೆಗೆಯುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ. ಅಲ್ಲದೇ ರಾತ್ರಿ ವೇಳೆಯೇ ಕಾಮಗಾರಿ ನಡೆಸಲು ಕಾರಣವನ್ನು ವಿವರಿಸಿದ್ದು ಬೆಳಗ್ಗೆ ವೇಳೆ ಟ್ರಾಫಿಕ್‌ ಇರುತ್ತೆ ಹಾಗಾಗಿ ರಾತ್ರಿ ಸಮಯದಲ್ಲಿ ಕೆಲಸ ಮಾಡ್ತಾ ಇದ್ದೇವೆ ಎಂದು ಉತ್ತರಿಸಿದ್ದಾರೆ.

ಅದೇನೆ ಆಗಲಿ, ರಸ್ತೆ ವ್ಯಾಪ್ತಿಗೆ ಬರುವ ಜಾಗದಲ್ಲಿ ಚರಂಡಿ ತೆಗೆಯುತ್ತಿದ್ದು ಸಾಕಷ್ಟು ವಿವಾದ ಸೃಷ್ಟಿಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ಸರಿಯಾದ ಕ್ರಮ ಕೈಗೊಳ್ಳಬೇಕಿದೆ.
 

Author:

share
No Reviews