ಶಿರಾ:
ಶಿರಾ ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ಅಜ್ಜಿಯ ಕಿವಿಯಲ್ಲಿದ್ದ ಓಲೆ ಮಾಟಿಯನ್ನು ಕಿತ್ತುಕೊಂಡು ಪರಾರಿಯಾಗಿದ್ದ ಹಂತಕನನ್ನು ಪಟ್ಟನಾಯಕನಹಳ್ಳಿ ಪೊಲೀಸರು ಕೇವಲ 24 ಗಂಟೆಯಲ್ಲೇ ಬಂಧಿಸಿದ್ದಾರೆ.
ಹೌದು ತಾಲೂಕಿನ ತಿಮ್ಮನಹಳ್ಳಿ ಗ್ರಾಮದ 75 ವರ್ಷ ವಯಸ್ಸಿನ ಚಿಕ್ಕವ್ವ ಎಂಬ ಅಜ್ಜಿ ಮನೆಯಲ್ಲಿ ಮಲಗಿದ್ದಾಗ, ಅದೇ ಗ್ರಾಮದ ಕೂಲಿಕೆಲಸ ಮಾಡುತ್ತಿದ್ದ ಗುರುಶಾಂತ ಎಂಬಾತ ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಮಧ್ಯರಾತ್ರಿ ಸುಮಾರು 1.30 ರ ಸಮಯದಲ್ಲಿ ಅಜ್ಜಿ ಕಿವಿಯಲ್ಲಿದ್ದ 40 ಸಾವಿರ ರೂ ಬೆಲೆ ಬಾಳುವ ಒಂದು ಜೊತೆ ಓಲೆ, ಮಾಟಿಯನ್ನ ಕಿವಿ ಹರಿದು ರಕ್ತ ಬರುವಂತೆ ಕಿತ್ತುಕೊಂಡು ಪರಾರಿಯಾಗಿದ್ದನು, ಈ ಬಗ್ಗೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರರಾದ ಅಶೋಕ್ ಕೆ.ವಿ IPS ರವರ ಮಾರ್ಗದರ್ಶನದಲ್ಲಿ , ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿ.ಮರಿಯಪ್ಪ ಹಾಗೂ ಬಿ.ಎಸ್. ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿ, ಶಿರಾ ಉಪವಿಭಾಗದ ಉಪಾಧೀಕ್ಷಕ ಬಿ.ಕೆ.ಶೇಖರ್ ರವರ ಮಾರ್ಗಸೂಚನೆ ಮೇರೆಗೆ ಸಿಪಿಐ, ಕೆ.ಆರ್. ರಾಘವೇಂದ್ರ, ಪಿ.ಎಸ್.ಐ. ಭವಿತ, ಮತ್ತು ಸಿಬ್ಬಂದಿಗಳಾದ ಸಿ.ಪಿ. ಕಿರಣ್ ಕುಮಾರ್, ರೇಣುಕ, ಹನುಮಂತಚಾರ್, ಗಣೇಶ್, ಕರೆಪ್ಪ ಹುಲಗೇರಿ, ನಾಗರಾಜು, ಗೋಪಿನಾಥ ಮತ್ತು ಚಾಲಕ ರಘು ಕುಮಾರ್ ರವರ ವಿಶೇಷ ತಂಡವು ಕೃತ್ಯ ನಡೆದ 24 ಗಂಟೆಯಲ್ಲೇ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಇನ್ನು ಈ ವಿಶೇಷ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಕೆ.ವಿ.ಅಶೋಕ್, ಐ.ಪಿ.ಎಸ್ ರವರು ಪ್ರಶಂಸಿಸಿದ್ದಾರೆ.