ಶಿರಾ : ಗ್ರಾಮ ಪಂಚಾಯ್ತಿ ಸಹಯೋಗದಡಿ ಸ್ವಚ್ಚತಾ ಆಂದೋಲನ ಸಮಾರೋಪ ಕಾರ್ಯಕ್ರಮ

ಗ್ರಾಮವನ್ನು ಸ್ವಚ್ಚಗೊಳಿಸುತ್ತಿರುವುದು.
ಗ್ರಾಮವನ್ನು ಸ್ವಚ್ಚಗೊಳಿಸುತ್ತಿರುವುದು.
ತುಮಕೂರು

ಶಿರಾ :

ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಬಡಮಾರನಹಳ್ಳಿ ಗ್ರಾಮದಲ್ಲಿ ಪರಿಸರ ರಕ್ಷಕ ಪೊರಕೆ ಮಂಜುನಾಥ್‌ ಅವರ ನೇತೃತ್ವದಲ್ಲಿ ಹಂದಿಕುಂಟೆ ಗ್ರಾಮ ಪಂಚಾಯ್ತಿ ಸಹಯೋಗದೊಂದಿಗೆ ಸ್ವಚ್ಚತಾ ಆಂದೋಲನ ಸಮಾರೋಪ ಸಮಾರಂಭ ನಡೆಸಲಾಯಿತು, ಈ ವೇಳೆ  ದೆಹಲಿ ವಿಶೇಷ ಪ್ರತಿನಿಧಿ , ಶಿರಾ ಕ್ಷೇತ್ರದ ಶಾಸಕ ಟಿ.ಬಿ ಜಯಚಂದ್ರ , ಹಂದಿಕುಂಟೆ ಗ್ರಾಮ ಪಂಚಾಯ್ತಿ ಗೀತಾ ಶಿವಣ್ಣ ಸೇರಿದಂತೆ ಹಲವು ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.

ತುಮಕೂರು ನಗರದ ಸಿದ್ದಾರ್ಥ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ, ಬಿ.ಎಸ್‌ ಮಂಜುನಾಥ್‌ 2019 ರಲ್ಲಿ ನಿವೃತ್ತರಾಗಿದ್ದರು, ಅಲ್ದೇ ಇವರಿಗೆ 62 ವರ್ಷ ವಯಸ್ಸಾಗಿದ್ದು, ಪರಿಸರ ಸೇನೆ ತಂಡ ರಚಿಸಿ ನಿತ್ಯ ರಸ್ತೆ ಸ್ವಚ್ಚಗೊಳಿಸಿ ಬಡಾವಣೆಯನ್ನಾಗಿ ನಿರ್ಮಿಸಲು ಪಣ ತೊಟ್ಟಿದ್ದು, ತನ್ನ ಸುತ್ತಲಿನ ಪ್ರದೇಶ ಸ್ವಚ್ಚವಾಗಿರಬೇಕು ಹಾಗೂ ಜನರು ಸೇವಿಸುವ ಗಾಳಿ ಪರಿಶುದ್ದವಾಗಿರಲಿ ಅನ್ನೋದು ಇವರ ಕಾಳಜಿ, ಈ ಕಾರಣದಿಂದಲೇ ತಮ್ಮ ಊರಿನಲ್ಲಿ ಪೊರಕೆ ಹಿಡಿದು ರಸ್ತೆಯ ಆಸುಪಾಸಿನಲ್ಲಿ ಬಿದ್ದಿರುವ ಕಸ ಕಡ್ಡಿ, ಗಿಡಗಂಟಿಗಳನ್ನು ಕೀಳುತ್ತಿದ್ದಾರೆ. ಅಲ್ದೇ ಈ ಕಾರ್ಯಕ್ಕೆ ತಗಲುವ ಮೊತ್ತವನ್ನು ಸ್ವಂತ ಖರ್ಚಿನಲ್ಲೇ ನೀಡ್ತಾ ಇದಾರೆ.

ಮಂಜುನಾಥ್‌ ಅವರು ಮಾತನಾಡಿ ಯುವಜನರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವುದೇ ನಮ್ಮ ಮುಖ್ಯ ಉದ್ದೇಶ. ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ನಮ್ಮ ಜೊತೆ ಕೈ ಜೋಡಿಸಬೇಕು ಎಂದರು.

Author:

share
No Reviews