ಶಿರಾ : ಊರುಗಳತ್ತ ಜನರ ದಂಡು | ಶಿರಾ ಟೋಲ್‌ ನಲ್ಲಿ ಫುಲ್ ಟ್ರಾಫಿಕ್ ಜಾಮ್

ಶಿರಾದ ಕರಜೀವನಹಳ್ಳಿ ಟೋಲ್‌
ಶಿರಾದ ಕರಜೀವನಹಳ್ಳಿ ಟೋಲ್‌
ತುಮಕೂರು

ಶಿರಾ:

ಮಾಘಮಾಸ ಶುರುವಾಗ್ತಿದ್ದಂತೆ ಹಲವು ಗ್ರಾಮಗಳಲ್ಲಿ ಜಾತ್ರೆಗಳು ಹಾಗೂ ರಥಸಪ್ತಮಿ ಅಂಗವಾಗಿ ಸಿಟಿಯಲ್ಲಿದ್ದ ಜನರು ತಮ್ಮ ಊರುಗಳತ್ತ ಬರ್ತಾ ಇದ್ದಾರೆ. ಹೀಗಾಗಿ ಟೋಲ್‌ಗಳಲ್ಲಿ ಫುಲ್‌ ಜಾಮ್‌ ಉಂಟಾಗಿದೆ. ಹೌದು ಹಲವು ಗ್ರಾಮಗಳಲ್ಲಿ ಊರ ಜಾತ್ರೆ ಹಾಗೂ ರಥ ಸಪ್ತಮಿ ಹಬ್ಬದ ಅಂಗವಾಗಿ ಸಾವಿರಾರು ಮಂದಿ ಶಿರಾ ಮಾರ್ಗವಾಗಿ ದಾವಣಗೆರೆ, ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಿಗೆ ಹಾಗೂ ಶಿರಾದ ಗ್ರಾಮಗಳಿಗೆ ಪ್ರಯಾಣ ಮಾಡ್ತಾ ಇದ್ದು, ಶಿರಾದ ಕರಜೀವನಹಳ್ಳಿ ಟೋಲ್‌ನಲ್ಲಿ ನಿನ್ನೆ ಟ್ರಾಫಿಕ್‌ ಜಾಮ್‌ ಉಂಟಾಯಿತು. ಟ್ರಾಫಿಕ್‌ ಜಾಮ್‌ನಿಂದಾಗಿ ಕೆಲ ಕಾಲ ವಾಹನಗಳು ಸಿಲುಕುವಂತಾಗಿದ್ದು, ಬಿರುಬಿಸಿಲಿನಲ್ಲಿ ನಿಲ್ಲುವಂತಾಯಿತು. ಅಲ್ಲದೇ ಟ್ರಾಫಿಕ್‌ನಿಂದ ಆಂಬುಲೆನ್ಸ್‌ ಸಹ ಪರದಾಡುವಂತಾಯಿತು.

ಅದ್ಧೂರಿ ಜಾತ್ರಾ ಮಹೋತ್ಸವ ಹಾಗೂ ವಿವಿಧ ಗ್ರಾಮಗಳ ಗ್ರಾಮ ದೇವತೆಗಳ ಮಹೋತ್ಸವದ ಜೊತೆಗೆ ಶನಿವಾರ, ಭಾನುವಾರ ರಜೆ ಇರೋದರಿಂದ ಸಾವಿರಾರು ವಾಹನಗಳು ಬೆಂಗಳೂರು, ತುಮಕೂರು ವಿವಿಧ ತಾಲೂಕುಗಳಿಂದ ಗ್ರಾಮಗಳಿಗೆ ಬಂದ ಪರಿಣಾಮ ಹೆದ್ದಾರಿ ರಸ್ತೆ ಸಂಪೂರ್ಣ ಜಾಮ್‌ ಆಗಿ, ವಾಹನ ಸವಾರರು ಪರದಾಡಿದರು. ಇನ್ನು ಟೋಲ್‌ಗಳಲ್ಲಿ ಪೊಲೀಸ್‌ ಸಿಬ್ಬಂದಿ ಕೊರತೆಯಿಂದ ಟ್ರಾಫಿಕ್‌ಅನ್ನು ಕ್ಲಿಯರ್‌ ಮಾಡಲು ಕಷ್ಟವಾಯ್ತು. ಸಾರ್ವಜನಿಕರೇ ಟ್ರಾಫಿಕ್‌ ಪೊಲೀಸರಂತೆ ನಿಂತು ಸುಗಮ ಸಂಚಾರಕ್ಕೆ ಕೆಲಸ ಮಾಡಿದರು.

Author:

...
Editor

ManyaSoft Admin

Ads in Post
share
No Reviews