ವಿಜಯಪುರ:
"ಪಾಕಿಸ್ತಾನ ನಮ್ಮ ವಿರೋಧಿ ರಾಷ್ಟ್ರ. ಅದರ ಮೇಲೆ ಕೇಂದ್ರ ಸರ್ಕಾರ ಯುದ್ಧ ಸಾರಿದರೆ, ನನಗೆ ಅವಕಾಶ ನೀಡಲಿ. ನಾನು ಗಡಿಯಲ್ಲಿ ಯುದ್ಧಕ್ಕೆ ಹೋಗಲು ಸಿದ್ಧನಿದ್ದೇನೆ" ಅಂತ ಸಚಿವ ಜಮೀರ್ ಅಹ್ಮದ್ ಪಾಕಿಸ್ತಾನದ ವಿರುದ್ಧ ತೊಡೆ ತಟ್ಟಿರೋ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಕಾಶ್ಮೀರದಲ್ಲಿ ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿದ್ರು. ಈ ವಿಚಾರವಾಗಿ ದೇಶದಲ್ಲೆಡೆ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಪಾಕಿಸ್ತಾನದ ವಿರುದ್ಧ ಒಂದು ಕಡೆ ಮೋದಿ ರಾಜತಾಂತ್ರಿಕ ಯುದ್ಧ ಮಾಡ್ತಿದ್ರೆ. ಇತ್ತ ವಿವಿಧ ಸಂಘಟನೆ ಗಳು ಪಾಪಿ ಪಾಕಿಸ್ತಾನದ ವಿರುದ್ಧ ಯುದ್ದ ಸಾರಲೇ ಬೇಕು ಅಂತ ಪಟ್ಟು ಹಿಡಿದಿವೆ. ಈ ಕಾರಣಕ್ಕೆ ಪ್ರಧಾನಿ ಮೋದಿ ಅವ್ರು ಮೂರು ಪಡೆಗಳ ಸಭೆ ನಡೆಸಿ ಯುದ್ಧ ವಿಚಾರವಾಗಿ ಅವರ ಆಲೋಚನೆಗೆ ಬಿಟ್ಟಿದ್ದರು.
ಇವೆಲ್ಲ ವಿಚಾರಗಳ ನಡುವೆ ವಿಜಯಪುರ ಜಿಲ್ಲೆಯ ಹೊಸಪೇಟೆಯಲ್ಲಿ ಕರ್ನಾಟಕದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಮೀಡಿಯ ಎದ್ರು ಪಾಕಿಸ್ತಾನದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಭಾರತ ಮತ್ತು ಪಾಕಿಸ್ತಾನ ಯುದ್ಧದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವ್ರು. "ಪಾಕಿಸ್ತಾನಕ್ಕೂ ನಮಗೂ ಎಂದಿಗೂ ಸಂಬಂಧವಿಲ್ಲ. ಪಾಕಿಸ್ತಾನ ಯಾವತ್ತಿಗೂ ನಮ್ಮ ಶತ್ರು ದೇಶನೇ. ಕೇಂದ್ರ ಸರ್ಕಾರ ಪಾಕಿಸ್ತಾನದ ಮೇಲೆ ಕೂಡಲೇ ಯುದ್ಧ ಸಾರಲಿ. ಗಡಿಯಲ್ಲಿ ನಿಂತು ಭಾರತಕ್ಕಾಗಿ ನಾನು ಹೋರಾಟ ಮಾಡುತ್ತೇವೆ. ಭಾರತ ಯಾವತ್ತಿದ್ದರೂ ಹಿಂದೂಸ್ಥಾನ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲಾನ ಮೇಲಾಣೆ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವ್ರು ಅನುಮತಿ ಕೊಡಲಿ, ಸೂಸೈಡ್ ಬಾಂಬ್ ಜೊತೆ ಪಾಕಿಸ್ತಾನಕ್ಕೆ ನಾನು ಹೋಗ್ತಿನಿ ಅಂತ ಜಮೀರ್ ಅಹಮದ್ ಅವ್ರು ಕೆರಳಿ ಕೆಂಡವಾದರು.