DAVANAGERE: ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ಊರನ್ನೇ ಬಿಟ್ಟ ಏಳೆಂಟು ಕುಟುಂಬಗಳು

ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ಊರನ್ನೇ ಬಿಟ್ಟ ಕುಟುಂಬಗಳು
ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ಊರನ್ನೇ ಬಿಟ್ಟ ಕುಟುಂಬಗಳು
ದಾವಣಗೆರೆ

ದಾವಣಗೆರೆ: 

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಗೊಳಿಸಿದೆ. ಅಲ್ಲದೇ ಅಧಿಕ ಬಡ್ಡಿ ಪಡೆಯುವುದನ್ನ ತಡೆಯುವ ವಿಧೇಯಕ್ಕೆ ತಿದ್ದುಪಡಿ ತರಲು ತಯಾರಿ ನಡೆಸಿದೆ. ಹೀಗಿದ್ದರೂ ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಕಿರುಕುಳ ಮುಂದುವರಿದಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಶಿವಗಂಗನಾಳ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್‌ ಸಿಬ್ಬಂದಿಗಳ ಕಿರುಕಳದಿಂದ ಬೇಸೆತ್ತು ಏಳೆಂಟು ಕುಟುಂಬಗಳು ಊರು ಬಿಟ್ಟಿವೆ.

ಶಿವಗಂಗನಾಳ ಗ್ರಾಮದ ಹಲವು ಕುಟುಂಬಗಳಿಗೆ ಸಾಲದ ಕಂತು ಪಾವತಿಸುವಂತೆ ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ನಿಮಗೆ ಸಿಬಿಲ್ ಸ್ಕೋರ್ ಬರದಿದ್ದರೆ ಎಲ್ಲೂ ನಯಾ ಪೈಸೆ ಸಾಲ ಹುಟ್ಟಲ್ಲ ಎಂದು ಹೆದರಿಸಿದ್ದಾರೆ. ಕೆಲವರನ್ನ ಪೊಲೀಸ್‌ ಠಾಣೆಗೆ ಕರೆಸಿ ಬೆದರಿಸುವಂತೆ ಮಾಡಿದ್ದಾರೆ.

ಯಾರ ಕೈ ಕಾಲು ಹಿಡಿದಾದರೂ ಸಾಲ ತಂದುಕೊಡು ಎಂದು ಮೈಕ್ರೋ ಫೈನಾನ್ಸ್‌ ಸಿಬ್ಬಂದಿಗಳು ಮಾನಸಿಕ ಹಿಂಸೆ ನೀಡಿದ್ದಾರೆ. ಇದರಿಂದ ಬೇಸತ್ತ ಶಿವಗಂಗನಾಳ ಗ್ರಾಮದ ಕುಟುಂಬಗಳು ಮನೆಗೆ ಬೀಗ ಹಾಕಿಕೊಂಡು ಊರು ಬಿಟ್ಟಿದ್ದಾರೆ.

Author:

...
Sub Editor

ManyaSoft Admin

Ads in Post
share
No Reviews