CRICKET: ಕೈಕೊಟ್ಟ ಸಂಜು ಸ್ಯಾಮ್ಸನ್ ಹೊಸ ನಾಯಕನ ಹುಡುಕಾಟದಲ್ಲಿ RR

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಗಾಯಗೊಂಡರು. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಎಸೆದ ಬಾಲ್ ಸಂಜು ಬೆರಳಿಗೆ ತಗುಲಿತು. ರಾಜಸ್ಥಾನ ರಾಯಲ್ಸ್ ನಾಯಕ ಸಂಪೂರ್ಣವಾಗಿ ಫಿಟ್ ಆಗಲು ಸುಮಾರು 6-7 ವಾರಗಳ ಅಗತ್ಯ ಇದೆ.

ಹೀಗಾಗಿ ಐಪಿಎಲ್​ನ ಮೊದಲ ಕೆಲವು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಹೊರಗುಳಿಯುವ ಸಾಧ್ಯತೆಯಿದೆ. ಇದು ರಾಜಸ್ಥಾನ್ ರಾಯಲ್ಸ್​ ತಂಡವನ್ನು ಸಹಜವಾಗಿಯೇ ಆತಂಕಕ್ಕೆ ತಳ್ಳಿದೆ. ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರಗುಳಿದರೆ, ಅವರ ಬದಲು  ಆಟಗಾರ ಯಾರು ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

ರಾಜಸ್ಥಾನ್ ರಾಯಲ್ಸ್​ ನಾಯಕರಾಗಿರುವ ಸಂಜು, ತಂಡವನ್ನು ಅದ್ಭುತವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 2021ರಿಂದ ಸಂಜು ಸ್ಯಾಮ್ಸನ್​ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದಾರೆ. 2022ರಲ್ಲಿ ರನ್ನರ್ ಅಪ್ ಆಗಿತ್ತು. 2024ರಲ್ಲಿ ಪ್ಲೇ-ಆಫ್ ಪ್ರವೇಶ ಮಾಡಿತ್ತು ರಾಜಸ್ಥಾನ್ ರಾಯಲ್ಸ್​. ಈ ಬಾರಿಯ ಮೆಗಾ ಹರಾಜಿನಲ್ಲಿ ದೊಡ್ಡ ದೊಡ್ಡ ಆಟಗಾರರನ್ನು ಖರೀದಿ ಮಾಡಿದೆ.

ಸಂಜು ಅವರು ಐಪಿಎಲ್​​ನಲ್ಲಿ 168 ಪಂದ್ಯಗಳನ್ನು ಆಡಿದ್ದಾರೆ. 139 ಸ್ಟ್ರೈಕ್​ರೇಟ್​ನಲ್ಲಿ 4419 ರನ್​ಗಳಿಸಿದ್ದಾರೆ. ಸಂಜು ಔಟ್ ಆದರೆ ಅವರ ಬದಲಿಗೆ ಯಾರನ್ನ ಆರ್​ಆರ್​ ಖರೀದಿ ಮಾಡುತ್ತೆ ಅನ್ನೋ ಕುತೂಹಲ ಹೆಚ್ಚಾಗಿದೆ. ಕನ್ನಡಿಗ ಮಯಾಂಗ್ ಅಗರ್ವಾಲ್, ಸರ್ಫರಾಜ್ ಖಾನ್ ಹಾಗೂ ಪೃಥ್ವಿ ಶಾ ಹೆಸರು ಕೇಳಿಬಂದಿದೆ. ಇವರುಗಳು ಐಪಿಎಲ್​ ಮೆಗಾ ಹರಾಜಿನಲ್ಲಿ ಸೇಲ್ ಆಗದೇ ಹೊರ ಉಳಿದಿದ್ದಾರೆ.

Author:

...
Sub Editor

ManyaSoft Admin

Ads in Post
share
No Reviews