Sandalwood: ಇಂದು ಅಮರಾವತಿ ಪೋಲಿಸ್ ಸ್ಟೇಷನ್ ಚಿತ್ರದ ಟೀಸರ್ ಬಿಡುಗಡೆ

ಅಮರಾವತಿ ಪೊಲೀಸ್‌ ಸ್ಟೇಷನ್‌ ಚಿತ್ರ ತಂಡ
ಅಮರಾವತಿ ಪೊಲೀಸ್‌ ಸ್ಟೇಷನ್‌ ಚಿತ್ರ ತಂಡ
ಸಿನಿಮಾ-ಟಿವಿ

Sandalwood: 

ಇಂದು "ಅಮರಾವತಿ ಪೊಲೀಸ್ ಸ್ಟೇಷನ್" ಟೀಸರ್‌ ಬಿಡುಗಡೆ ಮಾಡಲಾಯಿತು. ಚಿತ್ರದ ಕಥೆಯು ಕಡಲ ತೀರದ ಕಾಲ್ಪನಿಕ ಅಮರಾವತಿ ಎಂಬ ಊರಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಅಚ್ಚರಿ ಎನಿಸುವ ಘಟನೆಗಳ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ, ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿರುವ ಚಿತ್ರವಾಗಿದೆ.

ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ, ಎರಡು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ಇಂದು ನಡೆಯಿತು. ಸುಮಾರು 800ಕ್ಕೂ ಹೆಚ್ಚು ಚಿತ್ರಗಳಿಗೆ ಪ್ರಚಾರ ಕಾರ್ಯ ನಿರ್ವಹಿಸಿರುವ  ಕನ್ನಡ ಚಿತ್ರರಂಗದ ಹಿರಿಯ ಪ್ರಚಾರ ಕರ್ತರಾದ ನಾಗೇಂದ್ರ ಅವರು ಅಮರಾವತಿ ಪೊಲೀಸ್ ಸ್ಡೇಷನ್ ಚಿತ್ರದ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. 

ಚಿತ್ರದಲ್ಲಿ ನಟ ಧರ್ಮ ಕೀರ್ತಿರಾಜ್  ಈ ಚಿತ್ರದಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಆಗಿ  ನಟಿಸಿದ್ದು, ಗುರುರಾಜ್ ಜಗ್ಗೇಶ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ವೇದ್ವಿಕ  ಚಿತ್ರದ ನಾಯಕಿಯ ಪಾತ್ರ ಮಾಡಿದ್ದಾರೆ. ಪುನೀತ್ ಅರಸೀಕೆರೆ ಅವರ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು, ಪಿ. ಪಿ. ಪವರ್ ಪಿಕ್ಚರ್ಸ್  ಲಾಛನದಲ್ಲಿ  ಕೆ.ಆರ್.ಪ್ರದೀಪ್ ಕಮಲಪುರ ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ.

ಶ್ರೀಮತಿ ಗೀತಾ ಅಂಜನರೆಡ್ಡಿ ಅವರು ಸಹ ನಿರ್ಮಾಪಕಿಯಾಗಿದ್ದಾರೆ,  ಹಿರಿಯನಟಿ ಭವ್ಯ, ಧರ್ಮ, ಸಾಧು ಕೋಕಿಲ, ಕಾಕ್ರೋಚ್ ಸುಧಿ ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು ಮುಂತಾದವರು ಚಿತ್ರದ  ಉಳಿದ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ೪ ಹಾಡುಗಳಿದ್ದು, ರೋಣದ ಬಕ್ಕೇಶ್ ಅವರ ಸಂಗೀತ ಸಂಯೋಜನೆಯಿದೆ. ಗೌತಮ್ ಮಟ್ಟಿ ಅವರ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ, ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ, ವೆಂಕಿ ಯುವಿಡಿ ಅವರ ಸಂಕಲನ, ಆರ್ಯ ಶಿವು ಕರಗುಂದ ಅವರ ಸಂಭಾಷಣೆ ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರಕ್ಕಿದೆ.

 

Author:

...
Editor

ManyaSoft Admin

Ads in Post
share
No Reviews