Sandalwood: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ನಟ ಡಾಲಿ ಹಾಗೂ ಧನ್ಯತಾ

ನಟ ಡಾಲಿ ಧನಂಜಯ ಮತ್ತು ಧನ್ಯತಾ
ನಟ ಡಾಲಿ ಧನಂಜಯ ಮತ್ತು ಧನ್ಯತಾ
ಕನ್ನಡ

ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು. ವಿವಾಹಪೂರ್ವ ಶಾಸ್ತ್ರಗಳು ಭಾರಿ ಸಂಭ್ರಮದಿಂದ ನಡೆಯುತ್ತಿವೆ. ನಿನ್ನೆ ಧನ್ಯತಾ ಹಾಗೂ ಧನಂಜಯ್‌ ಅವರ ಅರಿಶಿನ ಶಾಸ್ತ್ರ ಕೂಡ ಜೋರಾಗಿ ನಡೆದಿದೆ.

ಮೈಸೂರಿನ ನಂಜನಗೂಡು ಬಳಿಯ ರಿವರ್‌ ರೇಂಜ್‌ ರೆಸಾರ್ಟ್ ನಲ್ಲಿ ಅರಿಶಿನ ಶಾಸ್ತ್ರ ನಡೆದಿದೆ. ಅರಿಶಿನ ಸಮಾರಂಭದಲ್ಲಿ ಆಪ್ತರು, ಕುಟುಂಬಸ್ಥರು  ಮಾತ್ರ ಭಾಗಿಯಾಗಿದ್ದಾರೆ. ಸಡಗರದಿಂದ ನೆರವೇರಿದ ಹಳದಿ ಶಾಸ್ತ್ರದಲ್ಲಿ ಡಾಲಿ ಧನಂಜಯ ಮತ್ತು ಧನ್ಯತಾ ಬಣ್ಣದ ಬದುಕಿಗೆ ಹೆಜ್ಜೆ ಇಟ್ಟಿದ್ದಾರೆ. ಹೊಸ ಜೋಡಿಗೆ ಸಪ್ತಮಿ ಗೌಡ, ಕಾರ್ತಿಕ್ ಗೌಡ, ಬಿ.ಸಿ. ಪಾಟೀಲ್ ಸೇರಿದಂತೆ ಆಪ್ತರು ಶುಭ ಹಾರೈಸಿದ್ದಾರೆ.  ಫೆಬ್ರವರಿ ೧೫ ಮತ್ತು ೧೬ ರಂದು ಮೈಸೂರಿನಲ್ಲಿ ಧನಂಜಯ್‌ ಮತ್ತು ಧನ್ಯತಾ ಅವರ ಮದುವೆ ನಡೆಯಲಿದೆ.

ಇಂದು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಟ ಮತ್ತು ಡಾಕ್ಟರ್ಆರತಕ್ಷತೆ ನಡೆಯಲಿದೆ. ಇಂದು ಬೆಳಗ್ಗೆಯಿಂದಲೇ ಶಾಸ್ತ್ರಗಳು ನಡೆಯಲಿವೆ. ಸಂಜೆ 6 ಗಂಟೆಯ ನಂತರ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷೆಯಲ್ಲಿ ಕೂಡ ಡಾಲಿ ಧನಂಜಯ ಅವರು ಫೇಮಸ್ ಆಗಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಅವರಿಗೆ ಸ್ನೇಹಿತರಿದ್ದಾರೆ. ಮದುವೆಗೆ ಅಪಾರ ಸಂಖ್ಯೆಯಲ್ಲಿ ಆಪ್ತರು ಆಗಮಿಸುವ ನಿರೀಕ್ಷೆ ಇದೆ.

Author:

...
Editor

ManyaSoft Admin

Ads in Post
share
No Reviews