ರಾಕಿಂಗ್ ಸ್ಟಾರ್ ಯಶ್ ಹಾಗೂ ಅಂಬರೀಷ್ ಮಧ್ಯೆ ಒಳ್ಳೆಯ ಬಾಂಧವ್ಯವಿತ್ತು. ಅಂಬರೀಷ್ ಅವರ ಆಸೆಯಂತೆ ಅಭಿಷೇಕ್ ಅವರ ಮಗುವಿಗೆ ಯಶ್ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಈ ಮೂಲಕ ನಟನ ಮೇಲಿರುವ ವಿಶೇಷ ಪ್ರೀತಿಯನ್ನು ಯಶ್ ತೋರಿಸಿದ್ದಾರೆ. ಅಂಬರೀಶ್ ಅವರ ಮೊಮ್ಮಗನ ನಾಮಕರಣ ಸಿದ್ದವಾಗಿದೆ. ಯಶ್ ಮಗಳು ಐರಾ ಜನಿಸಿದಾಗ ಅಂಬರೀಷ್ ಕೂಡ ಇದ್ದರು. ಯಶ್ ಮಗಳಿಗೆ ಕಲಘಟಗಿ ತೊಟ್ಟಿಲನ್ನು ಗಿಫ್ಟ್ ಆಗಿ ರೆಬೆಲ್ ಸ್ಟಾರ್ ಅಂಬರೀಷ್ ಮಾಡಿಸಿಕೊಟ್ಟಿದ್ದರು. ಇದನ್ನು ಯಶ್ ಅವರು ನೆನಪಿನಲ್ಲಿ ಇಟ್ಟುಕೊಂಡು ಈಗ ಅವರು ಕೂಡ ವಿಶೇಷ ತೊಟ್ಟಿಲು ಮಾಡಿಸಿ ಅಭಿಷೇಕ್ ಮನೆಗೆ ಕಳುಹಿಸಿದ್ದಾರೆ.
ಅಭಿಷೇಕ್ಗೆ ಮಗು ಆದ ಬಳಿಕ ಕಲಘಟಗಿ ತೊಟ್ಟಿಲಿನಲ್ಲಿ ಮಗುವನ್ನು ಮಲಗಿಸಿ ತೂಗಿಸಬೇಕು ಎಂಬ ಆಸೆ ಅಂಬರೀಷ್ ಅವರದ್ದಾಗಿತ್ತು. ಆ ಮಾತನ್ನು ಯಶ್ ನೆನಪಿನಲ್ಲಿಟ್ಟುಕೊಂಡಿದ್ದರು. ಅಭಿಷೇಕ್ಗೆ ಮಗು ಜನಿಸುತ್ತಿದ್ದಂತೆ ತೊಟ್ಟಿಲು ಮಾಡೋಕೆ ಆರ್ಡರ್ ಕೊಟ್ಟಿದ್ದರು ಎನ್ನಲಾಗಿದೆ. ಅಭಿ ಮಗನ ನಾಮಕರಣಕ್ಕೆ ಯಶ್ ಅವಿಸ್ಮರಣೀಯ ಉಡುಗೊರೆಯನ್ನು ನೀಡಿದ್ದಾರೆ. ಅಭಿಷೇಕ್ ಅವರಿಗೆ ಇತ್ತೀಚೆಗೆ ಗಂಡು ಮಗು ಜನಿಸಿತ್ತು. ಮಾರ್ಚ್ 14ಕ್ಕೆ ಅಭಿ ಮಗನ ನಾಮಕರಣ ನಡೆಯಲಿದೆ. ಈ ಕಾರಣಕ್ಕೆ ಯಶ್ ಅವರು ಕಲಘಟಗಿಯಿಂದ ತೊಟ್ಟಿಲು ಮಾಡಿಸಿ ಅಭಿಷೇಕ್ ಮನೆ ತಲುಪಿಸಿದ್ದಾರೆ. ಇದು ಯಶ್ ಹಾಗೂ ಅಂಬಿ ಅಭಿಮಾನಿಗಳಿಗೆ ಖುಷಿ ನೀಡಿದೆ.