RCB vs CSK :
ಐಪಿಎಲ್‌ನ ಬದ್ದವೈರಿಗಳು ಅಂತಲೇ ಕರೆಸಿಕೊಳ್ಳೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಅಂದರೆ ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗುತ್ತೆ. ಈ ತಂಡಗಳ ನಡುವಣ ಜಿದ್ದಾಜಿದ್ದಿನ ಪಂದ್ಯವನ್ನು ನೋಡೋದಕ್ಕೆ ಇಡೀ ಭಾರತವೇ ತುದಿಗಾಲಿನಲ್ಲಿ ನಿಂತಿರುತ್ತೆ. ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ ತಂಡವನ್ನು ಅವರ ತವರಿಗೆ ನುಗ್ಗಿ ಹೋಗಿ ಚಾಲೆಂಜರ್ಸ್ ಪಡೆ ಹೊಡೆದು ಬಂದಿದೆ. ಇವತ್ತು ಮತ್ತೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಹಾಗೂ ಸಿಎಸ್ ಕೆ ತಂಡಗಳು ಮುಖಾಮುಖಿಯಾಗ್ತಿದ್ದು, ಈ ಹೈವೋಲ್ಟೆಜ್ ಪಂದ್ಯವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದಾರೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ಆರ್ ಸಿಬಿ ಹಾಗೂ ಚೆನ್ನೈ ನಡುವಿನ ಪಂದ್ಯ ಅಂದರೆ ಅತ್ಯಂತ ಹೆಚ್ಚು ಜನರು ವೀಕ್ಷಣೆ ಮಾಡ್ತಾರೆ. ಈಗಾಗಲೇ ಪ್ಲೇ ಆಫ್ ರೇಸ್ ನಿಂದ ಸಿಎಸ್ ಕೆ ಹೊರಬಿದ್ದಿದ್ದು, ಆರ್ ಸಿಬಿ ಪ್ಲೇ ಆಫ್ ಗೆ ಎಂಟ್ರಿ ಕೊಡೋ ಸಮೀಪದಲ್ಲಿದೆ. ಇನ್ನು ತವರಿನ ಪಿಚ್ ನಲ್ಲಿ ಚೆನ್ನೈ ತಂಡವನ್ನು ಆರ್ ಸಿಬಿ ಸೋಲಿಸಿ ಶಕ್ತಿ ಪ್ರದರ್ಶಿಸಿತ್ತು, ಆದರೆ ಇಂದು ಮತ್ತೇ ಮುಖಾಮುಖಿಯಾಗ್ತಿರೋ ಬದ್ದ ವೈರಿಗಳ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಇಂದು ಸಂಜೆ ನಗರದಲ್ಲಿ ಮಳೆಯಾಗುವ ಸಾದ್ಯತೆ ಇದೆ.
ಇನ್ನು ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿರುವ ಆರ್ ಸಿಬಿಗೆ ಈ ಪಂದ್ಯವು ಮಹತ್ವದ್ದಾಗಿದ್ದು, 16 ಪಾಯಿಂಟ್‌ಗಳೊಂದಿಗೆ ಅಗ್ರ ಎರಡು ಸ್ಥಾನಗಳಲ್ಲಿ ಉಳಿಯಲು ನಿರ್ಣಾಯಕವಾಗಿದೆ. ಸದ್ಯ ಮಳೆಯಿಂದಾಗಿ ಉಭಯ ತಂಡಗಳ ಅಭ್ಯಾಸಕ್ಕೂ ತೊಂದರೆಯಾಗಿದ್ದು, ಪಂದ್ಯದ ವೇಳೆಯೂ ಮಳೆ ಬಂದರೆ ಏನು ಎಂಬ ಆತಂಕ ಇದೀಗ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಸದ್ಯ ಆರ್ಸಿಬಿ ಗೆಲುವಿನ ಹಳಿಯಲ್ಲಿದೆ. ಹಿಂದಿನ ಪಂದ್ಯದಲ್ಲಿ ಜ್ವರದಿಂದ ಅಲಭ್ಯರಿಂದ ಫಿಲ್ ಸಾಲ್ಟ್ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ.
ಒಟ್ಟಿನಲ್ಲಿ ಇಂದು ಒಂದೆಡೆ ಚೆನ್ನೈ ಸೇಡು ತೀರಿಸಿಕೊಳ್ಳೋ ತವಕದಲ್ಲಿದ್ದರೆ, ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿಕೊಡೋಕೆ ತುದಿಗಾಲಲ್ಲಿ ನಿಂತಿದೆ. ಅಭಿಮಾನಿಗಳ ವಲಯದಲ್ಲಂತೂ ಪಂದ್ಯದ ಮೇಲೆ ಕ್ರೇಜ್ ಹೆಚ್ಚಾಗಿದ್ದು. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದು ಆರ್ಸಿಬಿ ಪ್ಲೇಆಫ್ ಗೇರಲಿದೆಯಾ ಕಾದು ನೋಡಬೇಕಿದೆ.