IPL 2025 : ಐಪಿಎಲ್ ಲೀಗ್ ಹಂತದ ಎಲ್ಲಾ ಪಂದ್ಯಗಳು ಕೊನೆಗೊಂಡಿದ್ದು, ಇಂದು, ಐಪಿಎಲ್ 2025 ಸೀಸನ್‌ನ ಮೊದಲ ಕ್ವಾಲಿಫೈಯರ್ ಪಂದ್ಯವು ಚಂಡೀಗಢದ ಮುಲ್ಲಾನ್ಪುರದ ಮಹಾರಾಜ ಯಾದವೇಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಈ ಪಂದ್ಯದಲ್ಲಿ ಗೆದ್ದವರು ನೇರವಾಗಿ ಫೈನಲ್ ಪ್ರವೇಶಿಸಲಿದರೆ, ಸೋತವರು ಭಾನುವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಆಡಬೇಕಾಗುತ್ತೆ. ಆರ್‌ಸಿಬಿ ತಂಡವು ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ 9 ಗೆಲುವುಗಳೊಂದಿಗೆ 19 ಅಂಕಗಳನ್ನು ಗಳಿಸಿದೆ. ಮಳೆಯಿಂದಾಗಿ ಒಂದು ಪಂದ್ಯ ರದ್ದಾದ ಕಾರಣ, ನೆಟ್ ರನ್ ರೇಟ್ ಆಧಾರದಲ್ಲಿ ಎರಡನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ತಂಡವು 19 ಅಂಕಗಳೊಂದಿಗೆ ನೆಟ್ ರನ್ ರೇಟ್ ಆಧಾರದಲ್ಲಿ ಮೊದಲ ಸ್ಥಾನದಲ್ಲಿದೆ. ಈ ಬಾರಿ ಮೂರನೇ ಬಾರಿ ಉಭಯ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಸಿದ್ಧವಾಗಿದೆ.
ಇನ್ನು ಈ ಸ್ಟೇಡಿಯಂನಲ್ಲಿ, ರಾತ್ರಿ ಪಂದ್ಯಗಳಲ್ಲಿ ರನ್ ಚೇಸ್ ಮಾಡಲು ಕಷ್ಟವಾಗುತ್ತದೆ. ಪಿಚ್ ಬ್ಯಾಟ್ಸ್‌ಮೆನ್‌ಗಳಿಗೆ ಸಹಾಯಕವಾಗಿದ್ದು, ವೇಗಿ ಬೌಲರ್‌ಗಳಿಗೆ ಸಹಾಯ ದೊರೆಯಬಹುದು. ಈ ಪಂದ್ಯವು ಐಪಿಎಲ್ 2025 ಸೀಸನ್‌ನ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಗಲಿದೆ. ನೇರ ಫೈನಲ್ ಪ್ರವೇಶಿಸಲು ಎರಡೂ ತಂಡಗಳು ತಮ್ಮ ಶ್ರೇಷ್ಠ ಪ್ರದರ್ಶನ ನೀಡುವ ನಿರೀಕ್ಷೆ ಇದೆ.