ಚೆನ್ನೈ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 50 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. 17 ವರ್ಷಗಳ ಬಳಿಕ ಆರ್‌ಸಿಬಿ ಚೆನ್ನೈನಲ್ಲಿ CSK ತಂಡವನ್ನು ಸೋಲಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಋತುವಿನಲ್ಲಿ ಸತತ ಎರಡನೇ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಬೆಂಗಳೂರು ತಂಡವು ಇನ್ನೊಂದು ತಂಡದ ತವರಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಚೆಪಾಕ್ನಲ್ಲಿ ಸಿಎಸ್‌ಕೆ ವಿರುದ್ಧ ನಡೆದ ಪಂದ್ಯವನ್ನು ಆರ್‌ಸಿಬಿ 50 ರನ್ಗಳಿಂದ ಗೆದ್ದುಕೊಂಡಿದೆ. ಇದಕ್ಕೂ ಮೊದಲು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅವರ ತವರು ಮೈದಾನವಾದ ಈಡನ್ ಗಾರ್ಡನ್ಸ್‌ನಲ್ಲಿ ಸೋಲಿಸಿತ್ತು.
ಚೇಪಕ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರ್‌ಸಿಬಿ ಮೊದಲ ಬ್ಯಾಟಿಂಗ್ ಮಾಡಿತು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ ಒಳ್ಳೆಯ ಆರಂಭ ಪಡೆದರು. ಫಿಲಿಪ್ ಸಾಲ್ಟ್ ಕೇವಲ 16 ಬಾಲ್ನಲ್ಲಿ 5 ಬೌಂಡರಿ, 1 ಸಿಕ್ಸರ್ ಸಮೇತ 32 ರನ್ ಗಳಿಸಿ ಆಡುವಾಗ ಧೋನಿಯಿಂದ ಸ್ಟಂಪ್ ಔಟ್ ಆದರು.
ಕೊಹ್ಲಿ ರನ್ ಗಳಿಸಲು ಪರದಾಡಿದರೂ 30 ಎಸೆತಗಳಲ್ಲಿ 2 ಫೋರ್, 1 ಸಿಕ್ಸರ್ ಸಮೇತ 31 ರನ್ ಗಳಿಸಿ ವಿಕೆಟ್ ಒಪ್ಪಿಸದರು. ರಜತ್ ಪಾಟಿದಾರ್ ಮೂರು ಜೀವದಾನ ಪಡೆದುಕೊಂಡು ಕೊನೆಯವರೆಗೂ ಕ್ರೀಸ್ನಲ್ಲೇ ಬ್ಯಾಟ್ ಬೀಸಿ ಸ್ಫೋಟಕ ಹಾಫ್ಸೆಂಚುರಿ ಬಾರಿಸಿದರು. 32 ಬಾಲ್ಗಳನ್ನು ಎದುರಿಸಿದ ನಾಯಕ ರಜತ್, 4 ಬೌಂಡರಿ, 3 ಅತ್ಯದ್ಭುತವಾದ ಸಿಕ್ಸರ್ ಸಮೇತ 51 ರನ್ ಗಳಿಸಿದರು. ಇನ್ನು ಪಡಿಕ್ಕಲ್ 27, ಟಿಮ್ ಡೇವಿಡ್ 22 ರನ್ಗಳಿಂದ 20 ಓವರ್ಗಳಲ್ಲಿ 7 ವಿಕೆಟ್ಗೆ ಆರ್‌ಸಿಬಿ 197 ರನ್ಗಳ ಗುರಿ ನೀಡಿತ್ತು.
ಈ ಗುರಿ ಬೆನ್ನು ಹತ್ತಿದ್ದ ಚೆನ್ನೈಗೆ ಆರಂಭದಲ್ಲಿ ಹ್ಯಾಜಲ್ವುಡ್ ಬಿಗ್ ಕೊಟ್ಟರು. ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್ ಕಬಳಿಸಿ ಚೆನ್ನೈ ಸದ್ದನ್ನು ಸೈಲೆಂಟ್ ಮಾಡಿದರು. ನಾಯಕ ಗಾಯಕ್ವಾಡ್ ಡಕೌಡ್ ಆದ್ರು. ಹೂಡ, ದುಬೈ ಬಂದಷ್ಟೇ ವೇಗವಾಗಿ ಕ್ರೀಸ್ ಖಾಲಿ ಮಾಡಿದರು. ಎಂಎಸ್ ಧೋನಿ 16 ಬಾಲ್ಗಳಲ್ಲಿ 30 ರನ್ ಗಳಿಸಿ ಅಜೇಯರಾಗಿ ಉಳಿದರು. ರಚಿನ್ ರವೀಂದ್ರ 41 ರನ್ ಬಿಟ್ಟರೇ ಉಳಿದವರು ಯಾರು ಉತ್ತಮ ಬ್ಯಾಟಿಂಗ್ ಮಾಡಲಿಲ್ಲ.
ಹೀಗಾಗಿ ಚೆನ್ನೈ 20 ಓವರ್ಗಳಲ್ಲಿ 8 ವಿಕೆಟ್ಗೆ 146 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಕೊರೊಳೊಡ್ಡಿತು. 50 ರನ್ಗಳ ಅಂತರದಿಂದ ಬೆಂಗಳೂರು ವಿನ್ ಆಯಿತು. ಈ ಟೂರ್ನಿಯಲ್ಲಿ ಸತತ 2ನೇ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿ ಸಂಭ್ರಮಿಸಿದೆ. ಚೆನ್ನೈ ಅನ್ನು ಬಗ್ಗು ಬಡಿದು ಫ್ಯಾನ್ಸ್ ಖುಷಿಯನ್ನು ಆರ್‌ಸಿಬಿ ದುಪ್ಪಟ್ಟು ಮಾಡಿದೆ.
ತಂಡದ ಮಾಜಿ ಮಾಲಿಕ ವಿಜಯ್ ಮಲ್ಯ ಕೂಡ ಆರ್ ಸಿಬಿ ತಂಡದ ಗೆಲುವಿಗೆ ಶುಭಾಶಯ ತಿಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆದ್ದಾಗ ಕೂಡ ವಿಜಯ್ ಮಲ್ಯ ಟ್ವೀಟ್ ಮಾಡಿ ಆರ್ ಸಿಬಿ ತಂಡದ ಆಟವನ್ನು ಶ್ಲಾಘಿಸಿದ್ದರು.ಆರ್ ಸಿಬಿ ಗೆಲುವಿನ ಬಳಿಕ ಟ್ವೀಟ್ ಮಾಡಿರುವ ಅವರು, 18 ವರ್ಷಗಳ ಬಳಿಕ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಗೆಲುವು ಸಾಧಿಸಿದ್ದಕ್ಕೆ ಶುಭಾಶಯಗಳು ಆರ್ ಸಿಬಿ. ತಂಡದಿಂದ ಅತ್ಯುತ್ತಮ ಆಲ್‌ರೌಂಡರ್ ಪ್ರದರ್ಶನ ಬಂದಿದೆ. ಧೈರ್ಯವಾಗಿ ಆಡಿರಿ ಎಂದಿದ್ದಾರೆ.