ಶಿರಾ : ಶಿರಾ ತಾಲೂಕಿನಲ್ಲಿ ಸಂಭ್ರಮ ಸಡಗರದಿಂದ ರಂಜಾನ್‌ ಆಚರಣೆ

ಶಿರಾ :

ಇಂದು ನಾಡಿನಾದ್ಯಂತ ಮುಸ್ಲಿಮರ ಪವಿತ್ರ ಹಬ್ಬವಾದ ಜಾರಂನ್‌ ಸಂಭ್ರಮ ಸಡಗರ ಮನೆ ಮಾಡಿದೆ. ಇತ್ತ ಶಿರಾದಲ್ಲೂ ರಂಜಾನ್‌ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಶಿರಾ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ರಂಜಾನ್‌ ಅಂಗವಾಗಿ ಶ್ರದ್ದಾ ಭಕ್ತಿಯಿಂದ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ನಗರದ ವಿವಿಧ ಈದ್ಗಾ ಮೈದಾನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂದವರು ಒಟ್ಟಾಗಿ ಸೇರಿ ಮೆರವಣಿಗೆ ಮೂಲಕ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಒಬ್ಬರಿಗೊಬ್ಬರು ಶುಭಕೋರಿಕೊಂಡು, ಅಲ್ಲಾಹುವಿನ ಸ್ಮರಣೆಯಲ್ಲಿ ಮಗ್ನರಾಗಿದ್ದರು.

ಮುಸ್ಲಿಂ ಬಾಂಧವರ ಒಂದು ತಿಂಗಳ ಉಪವಾಸ ಇಂದು ಅಂತ್ಯವಾಗಿದ್ದು, ಸಾಮೂಹಿಕ ಪ್ರಾರ್ಥನೆಯಲ್ಲಿ ನೂತನ ವಸ್ತ್ರಗಳನ್ನು ಧರಿಸಿ, ಅರಬ್‌ ರಾಷ್ಟ್ರಗಳ ಮಾದರಿಯಲ್ಲಿ ರುಮಾಲು ಸುತ್ತಿದ್ದ ಚಿಣ್ಣರು, ಯುವಕರು ಎಲ್ಲರ ಗಮನ ಸೆಳೆದರು, ಈ ವೇಳೆ ದೇಶದಲ್ಲಿ ಉತ್ತಮ ಮಳೆ, ಬೆಳೆ ಆಗ್ಬೇಕು ಎಂದು ಬೇಡಿಕೊಂಡರು, ಇನ್ನು ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರಿಗೆ ತೊಂದರೆ ಯಾಗದಂತೆ ಕುಡಿಯಲು ನೀರಿನ ವ್ಯವಸ್ಥೆ , ನಮಾಜ್ ಮಾಡಲು ಪೆಂಡಾಲ್‌ ವ್ಯವಸ್ಥೆ ಹಾಗೂ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿಲಾಗಿತ್ತು.

Author:

...
Editor

ManyaSoft Admin

share
No Reviews