RAMANAGARA - ಅರಣ್ಯ ಪ್ರದೇಶಕ್ಕೆ ಹೊಸ ಹುಲ್ಲು ಚಿಗುರಲ್ಲಿ ಎಂದು ಬೆಂಕಿ ಇಟ್ಟ ಭೂಪ.. 30 ಎಕರೆ ಸುಟ್ಟು ಕರಕಲು

ಬೇಸಿಗೆ ಶುರುವಾಗ್ತಾ ಇದ್ದಂತೆ ಬೆಂಕಿ ದುರಂತಗಳು ಹೆಚ್ಚಾಗುವ ಸಾಧ್ಯತೆ ಇದೆ.ಬೇಸಿಗೆ ಅರಂಭದಲ್ಲೇ ಅಲ್ಲಲ್ಲಿ ಬೆಂಕಿ ಅವಘಡಗಳು ಜರುಗುತ್ತಿವೆ.  ಹೊಸ ಹುಲ್ಲು ಚಿಗುರಲಿ ಎಂದು ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕಿದ ಪರಿಣಾಮ ಸುಮಾರು 30 ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ವ್ಯಾಪ್ತಿಯ ಸಂಗಮ ವನ್ಯಜೀವಿ ವಲಯದಲ್ಲಿ ನಡೆದಿದೆ.

ಅರಣ್ಯಕ್ಕೆ ಬೆಂಕಿಹಾಕಿದ ಹೂಳ್ಯ ಗ್ರಾಮದ ರಾಜಪ್ಪ  ಎಂಬುವವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಸಂಗಮ ವನ್ಯಜೀವಿ ವಲಯದಲ್ಲಿ ಅರಣ್ಯ ಪ್ರದೇಶದಲ್ಲಿ ಕುರಿಗಾಹಿ ರಾಜಪ್ಪ ಮೇಕೆಗಳ ಮೇಯಿಸಲು ಹೋಗಿದ್ದ. ಅರಣ್ಯದಲ್ಲಿರುವ ಒಣ ಹುಲ್ಲು ಸುಟ್ಟರೆ ಹೊಸ ಹುಲ್ಲು ಚಿಗುರುತ್ತೆ. ಇದರಿಂದ ಕುರಿ, ಮೇಕೆಗಳಿಗೆ ಮೇವು ಸಿಗುತ್ತದೆ ಎಂಬ ಕಾರಣಕ್ಕೆ ಅರಣ್ಯಕ್ಕೆ ಬೆಂಕಿಹಚ್ಚಿದ್ದಾನೆ ಎನ್ನಲಾಗುತ್ತಿದೆ.

ಅರಣ್ಯಕ್ಕೆ ಬೆಂಕಿ ಬಿಂದ ಹಿನ್ನಲೆ ಗಸ್ತಿನಲ್ಲಿದ್ದ ಅರನ್ಯ ಇಲಾಖೆ ಸಿಬ್ಬಂಧಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಸಿಲಿ, ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾಗಿದ್ದಾರೆ.  ಬೆಂಕಿ ನಂದಿಸುವಷ್ಟರಲ್ಲಿ 30 ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ನಂತರ ಅಕ್ರಮವಾಗಿ ವನ್ಯಜೀವಿ ವಲಯಕ್ಕೆ ಹೋಗಿದ್ದ  ರಾಜಪ್ಪನನ್ನ ಹಿಡಿದು ಪ್ರಶ್ನೆ ಮಾಡಿದ್ದಕ್ಕೆ ಬೆಂಕಿಹಾಕಿದ್ದನ್ನ ರಾಜಪ್ಪ ಒಪ್ಪಿಕೊಂಡಿದ್ದಾನೆ. ಕೂಡಲೇ ಆರೋಪಿಯನ್ನು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

 

Author:

...
Editor

ManyaSoft Admin

Ads in Post
share
No Reviews