CCL 2025 : ಚೆನ್ನೈ ಮಣಿಸಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ ಪಂಜಾಬ್

ಸಿಸಿಎಲ್‌ 2025 ಟೂರ್ನಿಗೆ ತೆರೆ ಬಿದ್ದಿದೆ. ಫೈನಲ್‌ ತಂಡದಲ್ಲಿ ಚನ್ನೈ ರೈನೋಸ್‌ ಎದುರು ಪಂಜಾಬ್‌ ದಿ ಶೇರ್‌ ತಂಡ ಗೆದ್ದಿದೆ. 2 ಓವರ್‌ ಬಾಕಿ ಇರುವಂತೆ ಗೆಲುವಿನ ಗುರಿ ತಲುಪಿ ಟ್ರೋಫಿ ಎತ್ತಿ ಹಿಡಿದಿದೆ. ಮೈಸೂರಿನ ಕೆಎಸ್‌ ಸಿಎ ಕ್ರೀಡಾಂಗಣದಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಫೈನಲ್ ಪಂದ್ಯ ನಡೆಯಿತು.ಟಾಸ್ ಗೆದ್ದು ಪಂಜಾಬ್ ದಿ ಶೇರ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಚೆನ್ನೈ ತಂಡ ಮೊದಲು ಬ್ಯಾಟಿಂಗ್ ಮಾಡಿತು. 

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಮೊದಲ 10 ಓವರ್ ನ 5 ವಿಕೆಟ್ ನಷ್ಟಕ್ಕೆ 89 ರನ್ ಕಲೆ ಹಾಕಿತು. ಈ ರನ್ ಬೆನ್ನಟ್ಟಿದ ಪಂಜಾಬ್ ದಿ ಶೇರ್ ತಂಡ ತನ್ನ ಪಾಲಿನ 10 ಓವರ್ ನ ಮೊದಲ ಇನ್ನಿಂಗ್ಸ್ ನಲ್ಲಿ 103 ರನ್ ಬಾರಿಸಿತು. ಈ ಮೂಲಕ 14 ರನ್ ಗಳ ಮುನ್ನಡೆ ಪಡೆದುಕೊಂಡಿತು.

ಕಳೆದ ಕೆಲ ವಾರಗಳಿಂದ ಸಾಗುತ್ತಿದ್ದ ಸಿಸಿಎಲ್​ನ ಫಿನಾಲೆ ನಡೆದಿದೆ. ಈ ಪಂದ್ಯದಲ್ಲಿ ಚೆನ್ನೈ ರೈನೋಸ್‌ ಹಾಗೂ ಪಂಜಾಬ್‌  ಮುಖಾಮುಖಿ ಆದವು. ಈ ವೇಳೆ ಚೆನ್ನೈ ತಂಡ ಸೋತಿದ್ದು, ಪಂಜಾಬ್ ತಂಡ ಗೆಲುವಿನ ನಗೆ ಬೀರಿದೆ. ಈ ಮೂಲಕ ಮೊದಲ ಬಾರಿಗೆ ಕಪ್​ಗೆ ಪಂಜಾಬ್ ಮುತ್ತಿಟ್ಟಿದೆ.

ಡಾರ್ಲಿಂಗ್ ಕೃಷ್ಣ ಅವರು ಈ ಬಾರಿ ಸಿಸಿಲ್​ನಲ್ಲಿ ಕರ್ನಾಟಕ ಪರ ಅದ್ಭುತ ಪ್ರದರ್ಶನ ನೀಡಿದರು. ಅವರಿಗೆ ಬ್ಯಾಟರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಸಿಕ್ಕಿದೆ. ಈ ಅವಾರ್ಡ್ ಪಡೆದು ಕೃಷ್ಣ ಅವರು ಖುಷಿಪಟ್ಟಿದ್ದಾರೆ.

Author:

share
No Reviews