ಶಿರಾ :
ಶಿರಾ ನಗರ ವೇಗವಾಗಿ ಏನೋ ಬೆಳೆಯುತ್ತಿದೆ. ಮೂಲ ಸೌಕರ್ಯಗಳು ಇದ್ದರೂ ಕೂಡ ಇಲ್ಲದಂತಾಗಿದೆ. ಜನರಿಗಂಥಾ ನಾನಾ ಸೌಲಭ್ಯಗಳನ್ನು ಒದಗಿಸಿದ್ದರೂ ಕೂಡ ಆ ಸೌಲಭ್ಯಗಳ ಅನುಕೂಲ ಜನರಿಗೆ ಸಿಗ್ತಾ ಇಲ್ಲ ಅಂತಾನೇ ಹೇಳಲಾಗುತ್ತಿದೆ. ಹೌದು ಶಿರಾ ನಗರದಲ್ಲಿ ಸುಸಜ್ಜಿತವಾಗಿ ಬಸ್ ನಿಲ್ದಾಣ ಇದೆ, ಆದರೆ ಆ ಬಸ್ ನಿಲ್ದಾಣ ಎಷ್ಟರ ಮಟ್ಟಿಗೆ ಪ್ರಯಾಣಿಕರಿಗೆ ಉಪಯೋಗ ಆಗ್ತಾ ಇದೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಪ್ರಯಾಣಿಕರು ಹಾಗೂ ಸರ್ಕಾರಿ ಬಸ್‌ಗಳ ನಿಲುಗಡೆಗೆ ಇದ್ದಂತಹ ಸ್ಥಳ ಈಗ ಆಟೋ, ಬೈಕ್ ಸೇರಿ ಖಾಸಗಿ ವಾಹನಗಳ ಅತಿಕ್ರಮಣದಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗ್ತಿದೆ. ಪ್ರಯಾಣಿಕರು ಬಸ್‌ಗಾಗಿ ಮಳೆ, ಬಿಸಿಲು ಎನ್ನದೇ ಕಾಯಬೇಕಾದ ಸ್ಥಿತಿ ನಿರ್ಮಾಣ ಆಗಿದ್ದರೆ, ಇತ್ತ ಬಸ್‌ಗಳು ಬಸ್ ನಿಲ್ದಾಣದ ಮೈನ್ ಗೇಟ್‌ನಲ್ಲೇ ನಿಲ್ಲಿಸುವ ಸ್ಥಿತಿ ಎದುರಾಗಿದೆ. ಇದರಿಂದ ನಿತ್ಯ ಬೆಂಗಳೂರು, ತುಮಕೂರಿಗೆ ಕೆಲಸದ ನಿಮಿತ್ತ ತೆರಳುವ ಪ್ರಯಾಣಿಕರಿಗೆ ಆದರೆ ಇವರಿಗೆ ಸರಿಯಾದ ತುಂಗುದಾಣ ಇಲ್ಲದೇ ಪರದಾಡುವಂತ ಸ್ಥಿತಿ ಇದೆ. ಈಗ ಬೇಸಿಗೆ ಕಾಲವಾಗಿದ್ದು, ಪ್ರಯಾಣಿಕರು ಬಿರು ಬಿಸಿಲಲ್ಲೇ ಬಸ್‌ಗಾಗಿ ಕಾಯಬೇಕು. ಮಳೆಗಾಲ ಬಂತು ಎಂದರೆ ಮಳೆಯಲ್ಲೇ ನಿಲ್ಲಬೇಕಾದ ಸ್ಥಿತಿ ಇದೆ. ಬಸ್ ನಿಲ್ದಾಣ ನಿರ್ಮಾಣ ಆಗಿದ್ದರೂ ಕೂಡ ಖಾಸಗಿ ವಾಹನಗಳ ಉಪಟಳದಿಂದ ಪ್ರಯಾಣಿಕರಿಗೆ ಪೀಕಲಾಟ ಶುರುವಾಗಿದೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರಿ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್‌ಗಳ ಪ್ರವೇಶವನ್ನು ನಿಷೇಧಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.