KORATAGERE: ಹೊಳವನಹಳ್ಳಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ, ಉಪಾಧ್ಯಕ್ಷರು ಅವಿರೋಧ ಆಯ್ಕೆ

ಹೊಳವನಹಳ್ಳಿ ಕೃಷಿ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೇಶವಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ರವಿಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಹೊಳವನಹಳ್ಳಿ ಕೃಷಿ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೇಶವಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ರವಿಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ತುಮಕೂರು

ವೇಳೆ ನೂತನ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ,  ಗೃಹ ಸಚಿವ  ಡಾ. ಜಿ ಪರಮೇಶ್ವರ್ ಮತ್ತು ಸಹಕಾರ ಸಚಿವ ಕೆ ಎನ್ ರಾಜಣ್ಣನವರ ಆಶೀರ್ವಾದೊಂದಿಗೆ  ಎಲ್ಲಾ ನಿರ್ದೇಶಕರು ಸೇರಿದಂತೆ ಮುಖಂಡರುಗಳ ಸಹಾಯದಿಂದ ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ ಅವರಿಗೆಲ್ಲಾ ನನ್ನ ಕಡೆಯಿಂದ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಎಲ್ಲಾ ನಿರ್ದೇಶಕರುಗಳ ಜೊತೆಗೂಡಿ ರೈತರಿಗೆ ಸರ್ಕಾರದಿಂದ ತಲುಪುವ ಅನುದಾನಗಳನ್ನು ಯಾವುದೇ ಲೋಪವಿಲ್ಲದೆ ತಲುಪಿಸುವಂತಹ ಕೆಲಸ ಮಾಡುತ್ತೇನೆ ಎಂದರು.

 

ವಿಎಸ್ ಎಸ್ ಎನ್ ನಿರ್ದೇಶಕಿ ಸ್ವಾತಿ ಮಾತನಾಡಿ ಕಳೆದ ಮೂರು ಅವಧಿಯಲ್ಲಿ ಹೊಳವನಹಳ್ಳಿ ಗ್ರಾಮದ ಸಹಕಾರ ಸಂಘದಲ್ಲಿ ನಿರ್ದೇಶಕರುಗಳ ಸಹಯೋಗದಲ್ಲಿ ಚುನಾವಣೆ ನೆಡೆಯದೆ ಅವಿರೋಧ ಆಯ್ಕೆಯಾಗುತ್ತಿರುವುದು ವಿಶೇಷವಾಗಿದೆ. ಈ ಸಂಸ್ಥೆಯಲ್ಲಿ ಯಾವುದೇ ರಾಜಕೀಯ ಪಕ್ಷ ಬೇಡ  ರೈತರಿಗೆ ಸಹಕಾರ ಸಂಸ್ಥೆ ಆಶಾಕಿರಣವಿದ್ದಂತೆ ಎಲ್ಲರೂ ಸೇರಿ ರೈತರ ಪರ ಕೆಲಸ ಮಾಡುತ್ತೇವೆ ಎಂದರು.

Author:

...
Sub Editor

ManyaSoft Admin

Ads in Post
share
No Reviews