ವೃತ್ತಿಪರ ಮಾಧ್ಯಮಗಳ ಗೆಳೆಯರಿಂದ ಆರಂಭವಾಗುತ್ತಿರುವ ಪ್ರಜಾಶಕ್ತಿ ಸಮಾಜದ ಒರೆ ಕೋರಿಗಳ ತಿದ್ದುವ ಮಾಧ್ಯಮವಾಗಿ ಹೊರ ಹೊಮ್ಮಲು ಸಿದ್ಧವಾಗುತ್ತಿದೆ. ನಿಧಾನವಾದರೂ ಪ್ರಧಾನವಾಗಿ ಜನರ ಧ್ವನಿಯಾಗಿ ಕರ‍್ಯನರ‍್ವಹಿಸಲು ಸನ್ನದ್ಧಗೊಳ್ಳುತ್ತಿದೆ. ತುಮಕೂರು ನಾಗರಿಕರ ಸಮಸ್ಯೆಗಳ ಧ್ವನಿಯಾಗಿ ಎಲ್ಲ ರ‍್ಮಿಯರ, ಶೋಷಿತರ, ತಿಳಿತಕ್ಕೊಳಗಾದವರ, ಗ್ರಾಮೀಣ ಮತ್ತು ನಗರ ನಾಗರಿಕರ ಸಮಸ್ಯೆಗಳಿಗೆ ಬೆಂಗಾವಲಾಗಿ ನಿಲ್ಲಲ್ಲು ರೆಡಿಯಾಗುತ್ತಿದೆ. ನುರಿತ ಅನುಭವಿ ಪತ್ರರ‍್ತರು, ತಾಂತ್ರಿಕ ನಿಪುಣರು, ಸೈನಿಕರಂತೆ ಸೆಣಸಾಡಲು ವರದಿಗಾರರ ಪಡೆ ಟೊಂಕಕಟ್ಟಿ ನಿಂತಿದ್ದಾರೆ.
ಅತೀ ಶೀಘ್ರದಲ್ಲೇ ತುಮಕೂರು ನಗರದ ಔಟರ್ ರಿಂಗ್ ರೋಡ್, ದಾನ ನಗರದ ಸ್ಟಾರ್ ಕನ್ವೆಷನ್ ಹಾಲ್ ಎದುರು ಇರುವ ಆರ್.ಆರ್.ಕಾಂಪ್ಲೆಕ್ಸ್ ಬಿಲ್ಡಿಂಗ್‌ನ ಮೊದಲನೇ ಮಹಡಿಯಲ್ಲಿ ಪ್ರಜಾಶಕ್ತಿ ನ್ಯೂಸ್ ಚಾನಲ್ ಸನ್ನದ್ಧಗೊಳ್ಳುತ್ತಿದೆ.
ಪ್ರಜಾಶಕ್ತಿ ಲೋಗೋ ಅನಾವರಣಮಾಡಿದ ಗೃಹಸಚಿವರು
ಪ್ರಜಾಶಕ್ತಿ ಟಿವಿ ಚಾನಲ್‌ನ ಲೋಗೋ ಮತ್ತು ವೆಬ್‌ಸೈಟ್ ಸೆಪ್ಟೆಂಬರ್ ೧೫ ರಂದು ಮಾನ್ಯ ಕರ್ನಾಟಕ ಸರ್ಕಾರದ ಗೃಹಸಚಿವರಾದ ಡಾ.ಜಿ ಪರಮೇಶ್ವರ್‌ರವರು ಪ್ರಜಾಶಕ್ತಿ ಲೋಗೋ ಲೋಕಾರ್ಪಣೆ ನೆರವೆರಸಿದರು, ಈ ಸಂದರ್ಭದಲ್ಲಿ ಬೆಳ್ಳಾವಿ ಕಾರದ ಮಠದ ಶ್ರೀ ಕಾರದವೀರಬಸವ ಮಹಾಸ್ವಾಮಿಜಿ ದಿವ್ಯಸಾನಿಧ್ಯ ವಹಿಸಿದ್ದರು, ದೆಹಲಿ ವಿಶೇಷ ಪ್ರತಿನಿಧಿಗಳು ಹಾಗೂ ಶಿರಾ ತಾಲ್ಲೂಕಿನ ಶಾಸಕರಾದ ಟಿ.ಬಿ ಜಯಚಂದ್ರ,ತುಮಕೂರು ನಗರ ಶಾಸಕರಾದ ಜಿ.ಬಿ ಜ್ಯೋತಿಗಣೇಶ್,ತುಮಕೂರು ಗ್ರಾಮಾಂತರ ಶಾಸಕರಾದ ಬಿ.ಸುರೇಶ್‌ಗೌಡ,ಮಾಜಿ ಶಾಸಕರುಗಳಾದ ಷಫಿಕ್ ಅಹಮದ್,ಹೆಚ್.ನಿಂಗಪ್ಪ,
ಹಿರೇಮಠದ ಶಿವಾನಂದ ಶಿವಚಾರ್ಯ ಸ್ವಾಮೀಜಿ ಮುಂತಾದ ಹಲವು ಗಣ್ಯಾತಿ ಗಣ್ಯರು ಪ್ರಜಾಶಕ್ತಿಗೆ ಕಚೇರಿಗೆ ಭೇಟಿ ನೀಡಿ ಶುಭಾರೈಸಿದರು, ಇನ್ನೆನು ಕೆಲವೇ ದಿನಗಳಲ್ಲಿ ಬಹುದೊಡ್ಡ ನೆಟ್‌ವರ್ಕ್ನೊಂದಿಗೆ ಮನೆ ಮನ ಮುಟ್ಟಲಿದ್ದೇವೆ,
ನಾವು ನಂಬರ್-೧ ಆಗಬೇಕು ಎಂಬ ಹಂಬಲದ ಹಿಂದೆ ಓಡುವುದಿಲ್ಲ. ಹಾಗಂತ ನಾವು ನಂಬರ್-೧ ಆಗಲ್ಲ ಅಂಥ ಅಲ್ಲ. ನಂಬರ್-೧ ಸ್ಥಳೀಯ ಸುದ್ದಿಚಾಲನ್ ಆಗಿಯೇ ತೀರುತ್ತೇವೆ.
ಆಮೆ-ಮೊಲದ ಓಟದ ಕಥೆಯಲ್ಲಿ ಆಮೆಯ ನಡಿಗೆ ನಮ್ಮದಾದರೂ ಸುಧರ‍್ಘವಾಗಿ ಚಲಿಸಿ ಸಮಾಜದ ಪ್ರಾಚೀನ ಕೊಳೆಯನ್ನು ತಿಕ್ಕಿ ತೊಳೆಯುವ ಒಮ್ಮತದ ಪತ್ರರ‍್ತರ ಹಾದಿ ನಮ್ಮದು.
ಒಳ್ಳೆಯವರನ್ನು ನೋಯಿಸುವುದಿಲ್ಲ. ಸಮಾಜ ಘಾತುಕರನ್ನು ಬಿಡುವ ಮಾತಿಲ್ಲ. ಎಲ್ಲ ಸ್ಥರಗಳ ಜನರ ನ್ಯಾಯಕ್ಕಾಗಿ ಸದಾ ಹೋರಾಡುತ್ತೇವೆ. ಸ್ಥಳೀಯ ಸುದ್ದಿ, ಪ್ರಾದೇಶಿಕ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳ ಸಂಗಮ ನಿಮ್ಮ ಪ್ರಜಾಶಕ್ತಿ ನ್ಯೂಸ್ ಚಾನಲ್‌ನಲ್ಲಿ ನೋಡಬಹುದು.
ಶೀಘ್ರ, ಸಮಗ್ರ, ಒಳ್ಳೆಯ ಸಮಾಜಕ್ಕಾಗಿ ಪ್ರಜಾಶಕ್ತಿ ಟಿವಿ ಸಿದ್ದಗೊಳ್ಳುತ್ತಿದ್ದು ನಮ್ಮನ್ನು ಹರಸಿ, ಹಾರೈಸಿ, ಬೆಂಬಲಿಸಿ, ಬೆಳಸಿ ಎಂದು ವೀಕ್ಷಕ ಪ್ರಭುಗಳನ್ನು ಪ್ರಜಾಶಕ್ತಿ ಬಳಗ ನಮ್ರತೆಯಿಂದ ಕೋರಿಕೊಳ್ಳುತ್ತಿದ್ದೇವೆ.