ಪಾವಗಡ:
ಪಾವಗಡದ ಶ್ರೀಶೈಲ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಮೆಹತಾಬ್ ತಮ್ಮ ಅಪೂರ್ವ ಪ್ರತಿಭೆಯ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲಿಸಿದ್ದಾರೆ. ಕೇವಲ ಬಾಲ್ಯದಲ್ಲೇ ಅಪೂರ್ವ ಸಾಧನೆ ಮಾಡಿದ ಈ ಪುಟ್ಟ ಪ್ರತಿಭೆ "ಗಾಂಧಾರಿ ವಿದ್ಯೆ" ಯ ಮೂಲಕ ಗಮನ ಸೆಳೆದಿದ್ದಾರೆ.
ವಿದ್ಯಾರ್ಥಿನಿ ಮೆಹತಾಬ್ ತಾಯಿ ಮಾತನಾಡಿ ಪಟ್ಟಣದ ಖಾಸಗಿ ಸಂಸ್ಥೆಯಲ್ಲಿ ಗಾಂಧಾರಿ ವಿದ್ಯೆಯ ತರಬೇತಿ ಪಡೆದಿದ್ದು, ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ, ತನ್ನ ಮುಂದೆ ಇರಿಸಿದ ಬಣ್ಣಗಳು, ಸಂಖ್ಯೆಗಳು ಮತ್ತು ನೋಟುಗಳನ್ನು ಸುಲಭವಾಗಿ ಗುರುತಿಸುವ ಅಪೂರ್ವ ಪ್ರತಿಭೆ ಪ್ರದರ್ಶಿಸಿದ್ದಾರೆ. ಈ ವಿಶಿಷ್ಟ ಸಾಮರ್ಥ್ಯವನ್ನು ಗುರುತಿಸಿದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಮೆಹತಾಬ್ ಅವರ ಸಾಧನೆಯನ್ನು ದಾಖಲು ಮಾಡಿದ ಹಿನ್ನೆಲೆಯಲ್ಲಿ ನಮ್ಮ ಮಗು ಈ ಸಾಧನೆಗೆ ನಮ್ಮ ಕುಟುಂಬದವರಿಗೂ ಹಾಗೂ ಶಾಲಾಭಿವೃದ್ಧಿ ಗೌರವ ತಂದುಕೊಟ್ಟಿದೆ ಎಂದರು.
ಈ ಹಿನ್ನೆಲೆಯಲ್ಲಿ ಶ್ರೀಶೈಲ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಮೆಹತಾಬ್ ಮತ್ತು ಅವರ ಪೋಷಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಮಂಜುಳಾ ನಾಗಭೂಷಣ್ ಮಾತನಾಡಿ, "ನಮ್ಮ ಶಾಲೆಯ ಮೂರನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಪಡುವ ಸಂಗತಿ. ಇಂತಹ ಪ್ರತಿಭೆಗಳಿಗೆ ನಮ್ಮ ಶಾಲೆ ಸದಾ ಬೆಂಬಲ ನೀಡುತ್ತದೆ" ಎಂದು ಹೇಳಿದ್ದಾರೆ.
ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಮೆಹತಾಬ್ ಅವರ ಈ ಸಾಧನೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ವೆಂಕಟರಾಮಯ್ಯ, ಲಕ್ಷ್ಮಿ ವೆಂಕಟರಾಮಯ್ಯ, ಪ್ರಾಂಶುಪಾಲ ನಾಗೇಂದ್ರ ಮತ್ತು ಶಿಕ್ಷಕ ವೃಂದದವರು ಶ್ಲಾಘಿಸಿದ್ದು, ಅವರ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.