ಪಾವಗಡ : ಸೂರಿಗಾಗಿ ವಯೋವೃದ್ಧೆಯ ಕಣ್ಣೀರು ....!

  ವಯೋವೃದ್ಧೆ ಗಂಗಮ್ಮ
ವಯೋವೃದ್ಧೆ ಗಂಗಮ್ಮ
ತುಮಕೂರು

ಪಾವಗಡ :

ಬಡಜನರ, ಧ್ವನಿಯಿಲ್ಲದವರ ಧ್ವನಿಯಾಗಿ ಕೆಲಸ ಮಾಡುತ್ತಿರುವ ನಿಮ್ಮ ಪ್ರಜಾಶಕ್ತಿ ಟಿವಿ ಸಾಲುಸಾಲು ಬಡಜನರ ಕಣ್ಣೀರ ಕತೆಗಳನ್ನು, ಅವರ ನೋವುಗಳನ್ನ ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದೆ. ಇವತ್ತು ಕೂಡ ಅಂಥದ್ದೇ ಒಂದು ಕರುಳು ಹಿಂಡುವ ಕಥೆಯನ್ನು ಒಮ್ಮೆ ಓದಿ.

ಹೌದು, ಪಾವಗಡ ತಾಲೂಕಿನ ರಾಜವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯ್ಕನಹಳ್ಳಿ ಗ್ರಾಮದ ಗಂಗಮ್ಮ ಅನ್ನೋ ವಯೋವೃದ್ಧೆಯ ಕಥೆಯಿದು. ರೈತರು ಕೊಡೋ ದವಸ ಧಾನ್ಯಗಳಿಂದಲೇ ಜೀವನ ಸಾಗಿಸುತ್ತಿರೋ ಈ ಗಂಗಮ್ಮ, ಪಾಳುಬಿದ್ದಂತಿರೋ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ. ಈಗಲೋ, ಆಗಲೋ ಬೀಳುವಂತಿರೋ ಮನೆಯಲ್ಲಿ ಭಯದಿಂದಲೇ ಬದುಕುತ್ತಿದ್ದಾಳೆ. ಹೀಗಾಗಿ ಒಂದು ಸೂರು ಕೊಡಿಸಿ ಸಾಕು ಅಂತಾ ಕಣ್ಣೀರಿಡುತ್ತಿದ್ದಾರೆ.

ಈ ಅಜ್ಜಿಯೇ ಹೇಳ್ತಿರೋ ಹಾಗೆ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ತನ್ನ ಸಂಸಾರದೊಂದಿಗೆ ರಾಮನಗರದಲ್ಲಿ ವಾಸವಿದ್ರೆ, ಮತ್ತೊಬ್ಬ ಹೆಂಡತಿಯನ್ನು ಬಿಟ್ಟು ಈ ಅಜ್ಜಿಯ ಜೊತೆಯಲ್ಲಿಯೇ ಇದ್ದಾನೆ. ಆದ್ರೆ ಇಬ್ಬರೂ ಮಕ್ಕಳು ಈ ತಾಯಿಯನ್ನು ನೋಡಿಕೊಳ್ಳುತ್ತಿಲ್ಲ. ಮನೆಗೆ ಯಾರೂ ತಂದು ಹಾಕೋರಿಲ್ಲ. ಅವರವರ ಮಜಾದಲ್ಲಿ ಅವರಿದ್ದಾರೆ. ಹೀಗಾಗಿ ರೇಷನ್‌ ಅಕ್ಕಿ, ಗ್ರಾಮದ ರೈತರು ಕೊಡುವ ದವಸ ಧಾನ್ಯಗಳಿಂದಲೇ ಅಡುಗೆ ಮಾಡಿಕೊಂಡು ಈ ಅಜ್ಜಿ ಬದುಕುತ್ತಿದ್ದಾರೆ. ಇಷ್ಟೆಲ್ಲಾ ಕಷ್ಟ ಇದ್ದರೂ ಅಜ್ಜಿಗೆ ಯಾವುದೇ ಬೇಸರವಿಲ್ಲ, ಜೀವನಕ್ಕೇ ಏನೂ ತೊಂದರೆಯಿಲ್ಲ ಸ್ವಾಮಿ. ರೈತರು ತುಂಬಾ ಒಳ್ಳೆಯವರಿದ್ದಾರೆ. ಏನು ಬೇಕು ಅದನ್ನು ಕೊಡ್ತಾರೆ. ಆದರೆ ಅಡುಗೆ ಮಾಡಿಕೊಂಡು ಊಟ ಮಾಡೋಕೆ, ಮಲಗೋಕೆ ಒಂದು ಚಿಕ್ಕ ಸೂರಿನ ವ್ಯವಸ್ಥೆ ಮಾಡಿಕೊಟ್ಟರೆ ಸಾಕು ಅಂತಾ ಗಂಗಮ್ಮ ಕಣ್ಣೀರಿಟ್ಟಿದ್ದಾರೆ.

ಈ ವಯೋವೃದ್ಧೆ ಇಷ್ಟೆಲ್ಲಾ ಕಷ್ಟದಲ್ಲಿದ್ರು ಯಾವೊಬ್ಬ ಅಧಿಕಾರಿಯೂ ಕೂಡ ಈ ಕಡೆ ಗಮನಹರಿಸಿಲ್ಲ. ಜನಪ್ರತಿನಿಧಿಗಳು ಕೂಡ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ದಯವಿಟ್ಟು ಪಾವಗಡ ಶಾಸಕರು ಈ ಬಡಜನರ ಬಗ್ಗೆಯೂ ಗಮನಕೊಡಿ. ನಿಮ್ಮ ರಾಜಕೀಯ, ಅಧಿಕಾರದ ಹಪಾಹಪಿಯನ್ನ ಬದಿಗಿಟ್ಟು ಕ್ಷೇತ್ರದ ಜನರ ಸಮಸ್ಯೆಯ ಬಗ್ಗೆಯೂ ಆಲಿಸಿ ಅಂತಿದ್ದಾರೆ ಸ್ಥಳೀಯರು.

Author:

...
Editor

ManyaSoft Admin

Ads in Post
share
No Reviews