pavagada ರಾಜ್ಯ ಸರ್ಕಾರದ ವಿರುದ್ಧ ಸಂಸದ ಗೋವಿಂದ ಕಾರಜೋಳ ಫುಲ್ ಗರಂ

ಗೋವಿಂದ ಎಂ ಕಾರಜೋಳ
ಗೋವಿಂದ ಎಂ ಕಾರಜೋಳ
ತುಮಕೂರು

ಪಾವಗಡ ತಾಲೂಕಿನ ವೈ. ಎನ್. ಹೊಸಕೋಟೆ  ಹೋಬಳಿಯ ಚಿಕ್ಕಹಳ್ಳಿ ಗ್ರಾಮದಲ್ಲಿ ದೇವಸ್ಥಾನ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಎಂ ಕಾರಜೋಳ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ, ಜೆಡಿಎಸ್  ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

ಈ ವೇಳೆ ಕಾರ್ಯಕ್ರಮಲ್ಲಿ ಮಾತನಾಡಿದ ಚಿತ್ರದುರ್ಗದ ಸಂಸದ ಗೋವಿಂದ ಎಂ ಕಾರಜೋಳ ರಾಜ್ಯದಲ್ಲಿ ಯಾವ ಹಳ್ಳಿಯು ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಸರ್ಕಾರ ಸಂಪೂರ್ಣ ದಿವಾಳಿ ಆಗಿದೆ. 9 ಯೂನಿವರ್ಸಿಟಿಗಳನ್ನು  ಈಗಾಗಲೇ ಮುಚ್ಚಿದ್ದಾರೆ. ರಾಜ್ಯದ ಜನಕ್ಕೆ 5 ಗ್ಯಾರಂಟಿಗಳು ನೀಡಿದ್ದೇವೆ ಎಂಬುದಾಗಿ ಮುಖ್ಯಮಂತ್ರಿಗಳು  ಹೋದ ಕಡೆ ಭಾಷಣ ಮಾಡುತ್ತಿದ್ದಾರೆಯೇ ಹೊರತು ಅದು ಬಿಟ್ಟು ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಕೆಟ್ಟ ಗೌರ್ನಮೆಂಟ್ ಇದು. ರಾಜ್ಯದಲ್ಲಿ ಈಗಾಗಲೇ ಗುತ್ತಿಗೆದಾರರ  ಬಿಲ್ಲುಗಳ 50, ಸಾವಿರ ಕೋಟಿ ಬಿಲ್ಲು ಬಾಕಿ ಉಳಿದಿದೆ. ಈಗಾಗಲೇ ಗುತ್ತಿಗೆದಾರರು ಪ್ರತಿಭಟನೆಗೆ ಮುಂದಾಗಿದ್ದಾರೆ.  ಕೆಲವರು ವಿಷ  ತೆಗೆದುಕೊಳ್ಳುವ ಪರಿಸ್ಥಿತಿಗೆ ಮುಂದಾಗಿದ್ದಾರೆ. ಈ ಸರ್ಕಾರ ಬಂದ ಮೇಲೆ  ವಿಷ ಕುಡಿಯಲು ಸಹ 10 ರೂಪಾಯಿ  ಇಲ್ಲ ಎಂದು ತಿಳಿಸಿದರು

Author:

share
No Reviews