ಪಾವಗಡ : ತುಮುಲ್ ಅಧ್ಯಕ್ಷರಾದ ಬಳಿಕ ತವರಿಗೆ ಬಂದ ಶಾಸಕ ಎಚ್.ವಿ ವೆಂಕಟೇಶ್

ಪಾವಗಡ ಹಾಲು ಒಕ್ಕೂಟದ ಸದಸ್ಯರು ಶಾಸಕ ಎಚ್.ವಿ ವೆಂಕಟೇಶ್‌ಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದರು.
ಪಾವಗಡ ಹಾಲು ಒಕ್ಕೂಟದ ಸದಸ್ಯರು ಶಾಸಕ ಎಚ್.ವಿ ವೆಂಕಟೇಶ್‌ಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದರು.
ತುಮಕೂರು

ಪಾವಗಡ :

ತುಮುಲ್‌ ಅಧ್ಯಕ್ಷರಾದ ಬಳಿಕ ತವರು ಕ್ಷೇತ್ರ ಪಾವಗಡಕ್ಕೆ ಆಗಮಿಸಿದ ಶಾಸಕ ಎಚ್.ವಿ ವೆಂಕಟೇಶ್‌ಗೆ ಸ್ಥಳೀಯ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ಪಾವಗಡ ಹಾಲು ಒಕ್ಕೂಟದ ಕಚೇರಿಗೆ ಭೇಟಿ ನೀಡಿದ್ದು, ಒಕ್ಕೂಟದ ಸದಸ್ಯರು ವೆಂಕಟೇಶ್‌ಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ನೂತನ ತುಮುಲ್‌ ಅಧ್ಯಕ್ಷ ವೆಂಕಟೇಶ್‌ಗೆ ಶಾಲು ಹೊದಿಸಿ ಅಭಿನಂದನೆ ಸಲ್ಲಿಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ, ನೂತನ ತುಮುಲ್‌ ಅಧ್ಯಕ್ಷ ಎಚ್‌,ವಿ ವೆಂಕಟೇಶ್‌, ನಿಜಕ್ಕೂ ಈ ಹುದ್ದೆಗೆ ಬರಲು ನಾನು ಎಂದು ಭಾವಿಸಿರಲಿಲ್ಲ. ಆದರೆ ಏಕಾಏಕಿ ಬಂದಿರುವ ದೂರವಾಣಿ ಮೂಲಕ ಕರೆ ಮಾಡಿ ಬೆಂಗಳೂರಿಗೆ ಕರೆಸಿ ವಿಚಾರ ಹೇಳಿದ ನಂತರ ತಿಳಿದು ಬಂದಿತ್ತು. ಅಲ್ಲಿವರೆಗೂ ನನಗೆ ಯಾವುದೇ ತರದ ಮಾಹಿತಿ ಇರಲಿಲ್ಲ. ಹಿರಿಯರು ಗುರುತಿಸಿ ಆಯ್ಕೆ ಮಾಡಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ, ಹಾಗೂ ಅವರು ನೀಡಿದ ಈ ಹುದ್ದೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸುತ್ತೇನೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಹಂತಕ್ಕೆ ಕೊಂಡೊಯ್ಯಲು ಎಲ್ಲಾ ರೀತಿಯ ಪ್ರಯತ್ನಗಳು ಮಾಡುತ್ತೇನೆ ಎಂದರು.

ಮಾಜಿ ಸಚಿವರಾದ ವೆಂಕಟರಮಣಪ್ಪ ಮಾತನಾಡಿ, ಇತಿಹಾಸದಲ್ಲಿ ಮೊದಲ ಬಾರಿ ಹಿಂದುಳಿದ ವರ್ಗ ದವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ವಾಸು ಹಾಗೂ ನನ್ನ ಮಗ ವೆಂಕಟೇಶ್ ಒಂದೇ ತಾಯಿ ಮಕ್ಕಳ ರೀತಿಯಲ್ಲಿ ಇದ್ದರು. ಇಬ್ಬರು ಮುಂದೆ ನಿಂತು ವೆಂಕಟೇಶನ ಅಧ್ಯಕ್ಷರಾಗಿ ಮಾಡಬೇಕಾಗಿತ್ತು. ಆದರೆ ಅಧಿಕಾರದ ದಾಹ ಕೆಲವೊಮ್ಮೆ ರಾಜಕೀಯದಲ್ಲಿ ಇಂತಹ ಸನ್ನಿವೇಶಗಳು ಬರುವುದು ಸಹಜ ಎಂದರು. ಅವರಿಗಾಗಿದ್ದರೆ ಒಳ್ಳೆಯದಾ, ಆದ್ರೆ ವೆಂಕಟೇಶ್ ಗೆ  ಇದು ಸರಿ ಇಲ್ಲ ಎಂಬುದು ಬಿಂಬಿಸುವುದು ಸರಿಯೇ ಎಂದು ಎಸ್‌.ಆರ್‌ ಶ್ರೀನಿವಾಸ್‌ ವಿರುದ್ಧ ಬೇಸರ ವ್ಯಕ್ತಪಡಿಸಿದರು.

 

Author:

...
Editor

ManyaSoft Admin

Ads in Post
share
No Reviews