ಪಾವಗಡ : ಪಾವಗಡ ಪುರಸಭೆ ನಿರ್ಲಕ್ಷ್ಯದಿಂದ ಬಾಕಿ ಉಳಿದ ಕಂದಾಯ

ಪಾವಗಡ :

ಪಾವಗಡ ಪುರಸಭೆಯಲ್ಲಿ ಅಧ್ಯಕ್ಷ ಪಿ.ಎಚ್‌ ರಾಜೇಶ್‌ ನೇತೃತ್ವದಲ್ಲಿ ಸಾಮಾನ್ಯ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮಿ ಹನುಮಂತಪ್ಪ, ಮುಖ್ಯ ಅಧಿಕಾರಿ ಜಾಫರ್ ಶರೀಫ್, ಪುರಸಭೆ ಸದಸ್ಯರು ಭಾಗಿಯಾಗಿದ್ದರು. ಆದರೆ ಸಭೆಗೆ ಬಹುತೇಕ ಸದಸ್ಯರು ಗೈರಾಗಿದ್ದ ದೃಶ್ಯಗಳು ಕಂಡು ಬಂದಿತು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಪಿ.ಎಚ್‌ ರಾಜೇಶ್‌, ಅಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ರೂಪಾಯಿ ಕಂದಾಯ ಬಾಕಿ ಉಳಿಯಲು ಕಾರಣವಾಗಿದೆ ಎಂದು ಕಿಡಿಕಾರಿದರು. ಅಧಿಕಾರಿಗಳು ಕಂದಾಯವನ್ನು ತಾಯಿಯಂತೆ ಕಾಪಾಡಬೇಕು. ಇದನ್ನು  ಕಾಪಾಡಿದ್ರೆ ನಿಮ್ಮ ಜೀವನವೇ ಕಾಪಾಡಿದಂತೆ ಎಂದು ಸೂಚನೆ ನೀಡಿದರು. ಇನ್ನು 25 ವರ್ಷಗಳ ನಂತರ ವಾಣಿಜ್ಯ ಮಳಿಗೆಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು. ಇದರಿಂದ ಪುರಸಭೆಗೆ ಹೆಚ್ಚುವರಿ ಆದಾಯ ಬಂದಿದೆ ಎಂದು ಹೇಳಿದರು.

ಸಭೆಯಲ್ಲಿ ಸದಸ್ಯ ಸುದೇಶ್ ಬಾಬು ಮಾತನಾಡಿ, ಸುಮಾರು 80 ರಿಂದ 90 ಲಕ್ಷ ರೂಪಾಯಿಯ ಬಾಡಿಗೆ ಬಾಕಿ ಉಳಿದಿದ್ದು, ಅಧಿಕಾರಿಗಳು ಪ್ರತೀ ತಿಂಗಳು ತೆರಳಿ ಬಾಕಿ ವಸೂಲಿ ಮಾಡಿದರೆ ಮಾತ್ರ ಪುರಸಭೆಗೆ ಆದಾಯ ಉಂಟಾಗಲಿದೆ ಎಂದು ತಿಳಿಸಿದರು.

ಇದೇ ವೇಳೆ ಅಧ್ಯಕ್ಷ ರಾಜೇಶ್ ಅವರು ಕೇವಲ ನಾಲ್ಕು ತಿಂಗಳಲ್ಲಿ ನಾಲ್ಕು ವರ್ಷದ ಕೆಲಸ ಮಾಡಿರುವುದಾಗಿ ಸದಸ್ಯ ಸುದೇಶ್ ಬಾಬು ಪ್ರಶಂಸಿದರು. ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಗಳಲ್ಲಿ ಅವಕಾಶ ಸಿಗಲಿ ಎಂದು ಆಶಿಸಿದರು.

Author:

...
Sushmitha N

Copy Editor

prajashakthi tv

share
No Reviews