ಪಾವಗಡ :
ತುಮಕೂರಿನ ಗಡಿ ತಾಲೂಕು, ಸೋಲಾರ್ ಪಾರ್ಕ್ ಅಂತಾ ಫುಲ್ ಫೇಮಸ್ ಆಗಿರೋ ಪಾವಗಡದ ಶಾಸಕರು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇದ್ದಾರಾ ಇಲ್ವಾ ಎಂಬ ಪ್ರಶ್ನೆಯನ್ನು ಕ್ಷೇತ್ರದ ಜನರೇ ಕೇಳ್ತಾ ಇದ್ದಾರೆ. ಅಲ್ಲದೇ ಶಾಸಕರ ಮಾನವನ್ನು ಮತ ಹಾಕಿದ ಮತದಾರರೇ ಹರಾಜು ಹಾಕ್ತಿದ್ದಾರೆ. ಶಾಸಕರು ಹಾಗೂ ತುಮುಲ್ ಅಧ್ಯಕ್ಷರಾಗಿರೋ ಹೆಚ್.ವಿ ವೆಂಕಟೇಶ್ ಅವರ ಮಾನವನ್ನು ತಮ್ಮ ಕ್ಷೇತ್ರದ ಮತದಾರರೇ ಸೋಶಿಯಲ್ ಮಿಡಿಯಾದಲ್ಲಿ ಹರಾಜು ಹಾಕ್ತಿದ್ದಾರೆ.
ಗಡಿ ತಾಲೂಕಾದ ಪಾವಗಡದ ಬಹುತೇಕ ರಸ್ತೆಗಳ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಡಾಂಬರೇ ಇದುವರೆಗೂ ಕಂಡೇ ಇಲ್ಲ. ಶಾಸಕ ಹೆಚ್.ವಿ ವೆಂಕಟೇಶ್ ಅವರ ತಂದೆ ವೆಂಕಟರಮಣ್ಣಪ್ಪ ಈ ಹಿಂದೆ ಶಾಸಕರಾಗಿದ್ದ ವೇಳೆ ತಾಲೂಕಿನ ಅನೇಕ ಗ್ರಾಮಗಳ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದರು. ಆದರೆ ಅವರು ಅಧಿಕಾರದಿಂದ ಕೆಳಗಿಳಿದು ಅವರ ಮಗ ವೆಂಕಟೇಶ್ ಅಧಿಕಾರಕ್ಕೇರಿದರೂ, ರಸ್ತೆ ಕಾಮಗಾರಿಗಳು ಮಾತ್ರ ಕಂಡಿಲ್ಲ, ಇದರಿಂದ ಜನರು ಹಳ್ಳಗಳೇ ತುಂಬಿರೋ ರಸ್ತೆಯಲ್ಲೇ ವಿಧಿಯಿಲ್ಲದೇ ಸಾಗುವಂತಾಗಿದೆ, ಹೀಗಾಗಿ ಬೇಸತ್ತಿರೋ ಕ್ಷೇತ್ರದ ಜನರು ಶಾಸಕರ ಫೇಸ್ಬುಕ್ ಪೇಜ್ನಲ್ಲೇ ವಿಡಿಯೋವೊಂದನ್ನು ವೈರಲ್ ಮಾಡಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಇದು ಪಾವಗಡದ CK ಪುರ ಗ್ರಾಮ ಪಂಚಾಯ್ತಿಯ ಹನುಮಸಾಗರ ಗ್ರಾಮಕ್ಕೆ ತೆರಳೋ ರಸ್ತೆ ಆಗಿದ್ದು, ಸ್ವತಂತ್ರ ಪೂರ್ವದಿಂದಲೂ ಈ ರಸ್ತೆ ಡಾಂಬರೀಕರಣ ಕಂಡಿಲ್ಲ. ಈ ರಸ್ತೆಗೆ ಯಾವ ಟೇಪ್ ಕಟಿಂಗ್ ಶಾಸಕರೇ ಅಂತಾ ಪ್ರಶ್ನಿಸಿರೋ ವಿಡಿಯೋವನ್ನು ಶಾಸಕರ ಫೇಸ್ಬುಕ್ ಪೇಜ್ಗೆ ಹಾಕಲಾಗಿದೆ. ಈ ವಿಡಿಯೋ ಸದ್ಯ ಕ್ಷೇತ್ರದಲ್ಲಿ ಫುಲ್ ವೈರಲ್ ಆಗಿದ್ದು ಶಾಸಕರ ಮಾನ ಸೋಶಿಯಲ್ ಮಿಡಿಯಾದಲ್ಲಿ ಹರಾಜಾಗ್ತಿರೋದಂತೂ ಸುಳಲ್ಲ.